ಜೈಸ್ವಾಲ್, ಸರ್ಫರಾಜ್, ಜ್ಯುರೆಲ್ ಗೆ ರೋಹಿತ್ ಶರ್ಮಾ ಸ್ಪೆಷಲ್ ಗಿಫ್ಟ್
 
ಸರ್ಫರಾಜ್ ಮತ್ತು ಧ್ರುವ್ ಜ್ಯುರೆಲ್ ಗೆ ಇದು ಚೊಚ್ಚಲ ಪಂದ್ಯವಾಗಿತ್ತು. ಆದರೆ ಇಬ್ಬರೂ ಇದು ಅನುಭವಿಗಳಂತೆ ಆಡಿ ಎಲ್ಲರ ಗಮನ ಸೆಳೆದರು. ಸರ್ಫರಾಜ್ ಎರಡೂ ಇನಿಂಗ್ಸ್ ಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರೆ ಧ್ರುವ್ ವಿಕೆಟ್ ಕೀಪಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅದರಲ್ಲೂ ಧ‍್ರುವ್ ಮಾಡಿದ್ದ ಒಂದು ಅದ್ಭುತ ರನೌಟ್ ಎಲ್ಲರ ಗಮನ ಸೆಳೆದಿತ್ತು.
									
				ಪಂದ್ಯದ ಬಳಿಕ ಮಾತನಾಡಿದ್ದರ ರೋಹಿತ್ ಶರ್ಮಾ ಚೊಚ್ಚಲ ಪಂದ್ಯವಾಡಿದ ಸರ್ಫರಾಜ್ ಬ್ಯಾಟಿಂಗ್ ಬಗ್ಗೆ ವಿಶೇಷವಾಗಿ ಹೊಗಳಿದ್ದರು. ಸರ್ಫರಾಜ್ ತಾಕತ್ತಿನ ಬಗ್ಗೆ ನಮಗೆ ಅರಿವಿದೆ. ಅವರು ಅದನ್ನು ಸರಿಯಾಗಿ ಬಳಸಿಕೊಂಡರು ಎಂದು ಹೊಗಳಿದ್ದರು. ಅಲ್ಲದೆ ದ್ವಿ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್ ರನ್ನೂ ಕೊಂಡಾಡಿದ್ದರು.
									
				ಇದು ಇಷ್ಟಕ್ಕೇ ನಿಂತಿಲ್ಲ. ಸೋಷಿಯಲ್ ಮೀಡಿಯಾದಲ್ಲೂ ಈ ಮೂವರು ಹುಡುಗರನ್ನು ರೋಹಿತ್ ಕೊಂಡಾಡಿದ್ದಾರೆ. ಸಾಮಾನ್ಯವಾಗಿ ರೋಹಿತ್ ಸೋಷಿಯಲ್ ಮೀಡಿಯಾದಲ್ಲಿ ಇತರೆ ಆಟಗಾರರ ಪ್ರದರ್ಶನದ ಬಗ್ಗೆ ಹೇಳಿಕೊಳ್ಳುವುದು ಕಡಿಮೆ. ಆದರೆ ಈ ಮೂವರೂ ಈ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಸ್ಮರಣೀಯವಾಗಿಸಿದರು. ಹೀಗಾಗಿ ಈ ಮೂವರು ಪ್ರತಿಭಾವಂತರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿರುವ ರೋಹಿತ್ ಶರ್ಮಾ ಆಜ್ ಕಲ್ ಕಾ ಬಚ್ಚೇ ಎಂದು ಹಾಡಿ ಹೊಗಳಿದ್ದಾರೆ.