ಇದೊಂದು ಡಯಟ್ ನಿಂದ ಪತ್ನಿಯ 4 ನೇ ಸ್ಟೇಜ್ ಕ್ಯಾನ್ಸರ್ 40 ದಿನದಲ್ಲಿ ಹೋಯ್ತು: ನವಜೋತ್ ಸಿಂಗ್ ಸಿಧು

Krishnaveni K

ಶುಕ್ರವಾರ, 22 ನವೆಂಬರ್ 2024 (14:30 IST)
Photo Credit: X
ಮುಂಬೈ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ತಮ್ಮ ಪತ್ನಿಗೆ ಇದೊಂದು ಸಿಂಪಲ್ ಡಯಟ್ ನಿಂದಾಗಿ ಸ್ಟೇಜ್ 4 ಕ್ಯಾನ್ಸರ್ 40 ದಿನಗಳಲ್ಲೇ ಹೋಗಿದೆ ಎಂದು ಅಚ್ಚರಿಯ ಸಂಗತಿ ರಿವೀಲ್ ಮಾಡಿದ್ದಾರೆ. ಇದು ಎಷ್ಟೋ ಕ್ಯಾನ್ಸರ್ ರೋಗಿಗಳಿಗೆ ಪಾಠವಾಗಲಿದೆ.

ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಸಿಧುಗೆ ಸ್ತನ ಕ್ಯಾನ್ಸರ್ ಪತ್ತೆಯಾಗಿತ್ತು. ಇದು ನಾಲ್ಕನೇ ಹಂತಕ್ಕೆ ತಲುಪಿತ್ತು. ಇನ್ನು ಬದುಕುವುದೇ ಅನುಮಾನ ಎಂಬ ಸ್ಥಿತಿಯಿತ್ತು. ಆದರೆ ಇಂದು ಆಕೆ ಸಾವನ್ನು ಗೆದ್ದು ಬಂದಿದ್ದಾಳೆ. ಅದಕ್ಕೆ ಆಯುರ್ವೇದ ಪದ್ಧತಿಯ ಈ ಒಂದು ಸಿಂಪಲ್ ಡಯಟ್ ಕಾರಣ ಎಂದು ಸಿಧು ಹೇಳಿದ್ದಾರೆ.

ಸಿಧು ಪತ್ನಿ ಮಾಡಿದ್ದು ಇಷ್ಟೇ
ಅಷ್ಟಕ್ಕೂ ಸಿಧು ಪತ್ನಿಗೆ ಕ್ಯಾನ್ಸರ್ ವಾಸಿ ಮಾಡಿದ ಸಿಂಪಲ್ ಡಯಟ್ ಏನು ಗೊತ್ತಾ? ಈ ಬಗ್ಗೆ ಅವರೇ ಹೇಳಿದ್ದಾರೆ. ‘ನನ್ನ ಪತ್ನಿಗೆ ಕ್ಯಾನ್ಸರ್ ನಾಲ್ಕನೇ ಹಂತಕ್ಕೆ ತಲುಪಿತ್ತು. ಸ್ತನ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೂ ಒಳಗಾದಳು. ಪಟಿಯಾಲದ ರಾಜೇಂದ್ರ ಆಸ್ಪತ್ರೆ ಮತ್ತು ಯಮುನಾನಗರದ ಡಾ ಮರ್ಯಂ ಸಿಂಗ್ ಆಸ್ಪತ್ರೆಯಲ್ಲಿ ಸುದೀರ್ಘ ಚಿಕಿತ್ಸೆ ಪಡೆದಿದ್ದಾಳೆ. ಈ ಸಂದರ್ಭದಲ್ಲಿ ಹಲವು ಕಿಮೋಥೆರಪಿ ಸೆಷನ್ ಗೆ ಹೋಗಿದ್ದಾಳೆ. ಆಕೆಗೆ ಕ್ಯಾನ್ಸರ್ ಇರುವುದು ಗೊತ್ತಾದಾಗ ಇಡೀ ಕುಟುಂಬ ಸಾಕಷ್ಟು ಸಂಶೋಧನೆ ಮಾಡಿದೆವು. ಸಾಕಷ್ಟು ಪುಸ್ತಕಗಳನ್ನು ಓದಿ ವಿಷಯ ತಿಳಿದುಕೊಂಡೆವು. ಅದರಂತೆ ಜೀವನ ಶೈಲಿ ಮತ್ತು ಆಹಾರ ಕ್ರಮ ಬದಲಿಸಿದೆವು.

ಕ್ಯಾನ್ಸರ್ ಉರಿಯೂತವು ಹಾಲು, ಗೋಧಿಯಂತಹ ಕಾರ್ಬೋಹೈಡ್ರೇಟ್ ಗಳು, ಸಂಸ್ಕರಿಸಿದ ಮೈದಾ, ಸಕ್ಕರೆ, ಎಣ್ಣೆ, ಹಾಲಿನ ಉತ್ಪನ್ನಗಳಿಂದ ಬರುತ್ತವೆ ಎಂದು ಗೊತ್ತಾಯಿತು. ಕೇವಲ 40 ದಿನ ಇಂತಹ ಎಲ್ಲಾ ಆಹಾರಗಳಿಂದ ಕೌರ್ ದೂರವುಳಿದರು. ನಿಂಬೆ, ಬೇವು, ಹಸಿ ಅರಿಶಿನ, ಬೆಳ್ಳುಳ್ಳಿ ಇತ್ಯಾದಿಗಳ ಬೆಚ್ಚಗಿನ ಪಾನೀಯ ಸೇವಿಸುತ್ತಾ ಬಂದಳು. ಈ ಆಹಾರ ಕ್ರಮ ಅವಳಲ್ಲಿ ಬದಲಾವಣೆ ತಂದಿತು. ಈಗ ವೈದ್ಯಕೀಯವಾಗಿಯೂ ಆಕೆ ಕ್ಯಾನ್ಸರ್ ಮುಕ್ತಳಾಗಿದ್ದಾಳೆ ಎಂದು ಸಿಧು ಸಂತೋಷದಿಂದ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ