ರಿಷಬ್ ಪಂತ್ ಗಿಂತ ಸಂಜು ಸ್ಯಾಮ್ಸನ್ ವಾಸಿ ಎಂದ ನೆಟ್ಟಿಗರು
ಸಂಜು ಈ ಮೂರೂ ಪಂದ್ಯಗಳಲ್ಲಿ ನೀಡಿದ ನಿರ್ವಹಣೆಯಿಂದ ಅಭಿಮಾನಿಗಳು ತೃಪ್ತರಾಗಿದ್ದಾರೆ. ಅದರಲ್ಲೂ ಮೂರನೇ ಪಂದ್ಯದಲ್ಲಿ ಅವರು ಅತ್ಯದ್ಭುತ ಕ್ಯಾಚ್ ಗಳನ್ನು ಪಡೆದಿರುವುದು ನೋಡಿ ರಿಷಬ್ ಗಿಂತ ಸಂಜು ಸ್ಯಾಮ್ಸನ್ ಬೆಸ್ಟ್ ಎನ್ನುತ್ತಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ರಿಷಬ್ ಸೀಮಿತ ಓವರ್ ಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಟೆಸ್ಟ್ ತಂಡದಲ್ಲಿ ರಿಷಬ್ ರನ್ನು ಉಳಿಸಿ ಸೀಮಿತ ಓವರ್ ಗಳಲ್ಲಿ ಸಂಜು ಸ್ಯಾಮ್ಸನ್ ಗೆ ಹೆಚ್ಚು ಅವಕಾಶ ನೀಡಬೇಕು ಎಂಬ ಅಭಿಪ್ರಾಯ ಕೇಳಿಬಂದಿದೆ.