ಟಾಸ್‌ ಗೆದ್ದ ನ್ಯೂಜಿಲೆಂಡ್‌ ಫೀಲ್ಡಿಂಗ್‌ ಆಯ್ಕೆ: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪುಟಿದೇಳುವುದೇ ಬಾಂಗ್ಲಾ

Sampriya

ಸೋಮವಾರ, 24 ಫೆಬ್ರವರಿ 2025 (14:13 IST)
Photo Courtesy X
ರಾವಲ್ಪಿಂಡಿ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಇಂದು ನ್ಯೂಜಿಲೆಂಡ್‌ ತಂಡವು ಬಾಂಗ್ಲಾದೇಶವನ್ನು ಎದುರಿಸಲಿದೆ. ಇದು ಬಾಂಗ್ಲಾದೇಶ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಟಾಸ್‌ ಗೆದ್ದ ನ್ಯೂಜಿಲೆಂಡ್‌ ತಂಡವು ಬಾಂಗ್ಲಾದೇಶ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ಈ ಪಂದ್ಯವು ಉಭಯ ತಂಡಗಳಿಗೆ ಪ್ರತಿಷ್ಠೆಯಾಗಿದ್ದು, ಗೆಲುವುಗಾಗಿ ಹೋರಾಟ ನಡೆಸಲಿವೆ.

ಮಿಚೆಲ್‌ ಸ್ಯಾಂಟನರ್‌ ಬಳಗವು ಈ ಪಂದ್ಯವನ್ನು ಗೆದ್ದುಕೊಂಡು ಸೆಮಿಫೈನಲ್‌ಗೆ ಟಿಕೆಟ್‌ ಪಡೆಯಲು ಎದುರು ನೋಡುತ್ತಿದೆ.  ನ್ಯೂಜಿಲೆಂಡ್ ತಂಡವು ಈಗಾಗಲೇ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಪಾಕಿಸ್ತಾನ ತಂಡವನ್ನು 60 ರನ್‌ಗಳಿಂದ ಮಣಿಸಿದೆ.

ಬಾಂಗ್ಲಾದೇಶ ತಂಡವು ಮೊದಲ ಪಂದ್ಯದಲ್ಲಿ ಭಾರತದ ಎದುರು 6 ವಿಕೆಟ್‌ಗಳಿಂದ ಸೋತಿದೆ. ಸೆಮಿಫೈನಲ್ ಪ್ರವೇಶಿಸುವ ಆಸೆ ಜೀವಂತವಾಗುಳಿಯಬೇಕಾದರೆ ಬಾಂಗ್ಲಾ ತಂಡವು ಈ ಪಂದ್ಯದಲ್ಲಿ ಜಯಿಸಲೇಬೇಕು. ಮಾತ್ರವಲ್ಲ, ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಪಾಕ್‌ ತಂಡವನ್ನು ಸೋಲಿಸಬೇಕು.

ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡವನ್ನು ಮಣಿಸಿರುವ ಭಾರತ ತಂಡವು ಈಗಾಗಲೇ ಸೆಮಿಫೈನಲ್‌ಗೆ ಮುನ್ನಡೆಸಿದೆ. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಮುಂದಿನ ಭಾನುವಾರ ನ್ಯೂಜಿಲೆಂಡ್‌ ತಂಡವನ್ನು ಎದುರಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ