ಫಿರೋಜ್ ಶಾ ಕೋಟ್ಲಾದಲ್ಲಿ ನ್ಯೂಜಿಲೆಂಡ್-ಭಾರತ ಅಭ್ಯಾಸ ಪಂದ್ಯ

ಶುಕ್ರವಾರ, 5 ಆಗಸ್ಟ್ 2016 (13:23 IST)
ದೆಹಲಿ ಫಿರೋಜ್ ಶಾ ಕೋಟ್ಲಾ ನ್ಯೂಜಿಲೆಂಡ್‌ನ ಭಾರತ ಪ್ರವಾಸದಲ್ಲಿ ಅಭ್ಯಾಸ ಪಂದ್ಯಕ್ಕೆ ಆತಿಥ್ಯ ವಹಿಸಲು ಸಜ್ಜಾಗಿದೆ. ಪ್ರವಾಸಿ ತಂಡವು ಸೆ. 16-18ರವರೆಗೆ ಮಂಡಳಿ ಅಧ್ಯಕ್ಷರ ಇಲೆವನ್ ವಿರುದ್ಧ ಪಂದ್ಯವಾಡಲಿದೆ. ಕೋಟ್ಲಾಗೆ ದುಲೀಪ್ ಟ್ರೋಫಿ ನಸುಗೆಂಪು ಚೆಂಡಿನ ಆಟವನ್ನು ಆಡಿಸಲು ಆಫರ್ ನೀಡಲಾಗಿತ್ತು.

ಆದರೆ ಪ್ರಸಕ್ತ ಮುಂಗಾರಿನ ಹಿನ್ನೆಲೆಯಲ್ಲಿ  ಪಂದ್ಯಕ್ಕೆ ಮೈದಾನವನ್ನು ಸಿದ್ಧಪಡಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಯುಪಿಸಿಎನ ಹೊಸ ಮೈದಾನ ಗ್ರೇಟರ್ ನೊಯ್ಡಾದಲ್ಲಿ ಫ್ಲಡ್‌ಲೈಟ್ ಸೌಲಭ್ಯವಿದ್ದು, ದುಲೀಪ್ ಟ್ರೋಫಿ ಹಗಲು ರಾತ್ರಿ ಪಂದ್ಯವನ್ನು ಆಗಸ್ಟ್ 23ರಂದು ಆಡಿಸಲಾಗುತ್ತದೆ ಎಂದು ಹಿರಿಯ ಬಿಸಿಸಿಐ ಮೂಲವೊಂದು ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 ಡಿಡಿಸಿಎ ನ್ಯೂಜಿಲೆಂಡ್ ಅಬ್ಯಾಸ ಪಂದ್ಯ ಆಯೋಜಿಸಲಿದ್ದು, ಆ ಮೈದಾನವು ಸೆ.22-26ರವರೆಗೆ ನಡೆಯುವ ಪ್ರಥಮ ಟೆಸ್ಟ್‌ಗೆ ಹತ್ತಿರದಲ್ಲಿದೆ.

ವೆಬ್ದುನಿಯಾವನ್ನು ಓದಿ