ಐಪಿಎಲ್ ಆಡುವುದಕ್ಕೆ ದ.ಆಫ್ರಿಕಾ, ನ್ಯೂಜಿಲೆಂಡ್ ಆಟಗಾರರಿಗೆ ಒಪ್ಪಿಗೆ

ಶುಕ್ರವಾರ, 24 ಜುಲೈ 2020 (10:30 IST)
ಮುಂಬೈ: ಕೊರೋನಾ ನಡುವೆಯೂ ಸುರಕ್ಷತೆ ದೃಷ್ಟಿಯಿಂದ ವಿದೇಶೀ ಆಟಗಾರರು ಐಪಿಎಲ್ ಆಡುವುದಕ್ಕೆ ಮೀನ ಮೇಷ ಎಣಿಸುತ್ತಿದ್ದರೆ, ದ.ಆಫ್ರಿಕಾ, ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಈಗಾಗಲೇ ತಮ್ಮ ಕಡೆಯಿಂದ ನೋ ಆಬ್ಜಕ್ಷನ್ ಎಂದಿದೆ.


ತಮ್ಮ ದೇಶದ ಆಟಗಾರರು ಐಪಿಎಲ್ 13 ರಲ್ಲಿ ಭಾಗವಹಿಸುವುದಕ್ಕೆ ಮಂಡಳಿಯ ಅಭ್ಯಂತರವಿಲ್ಲ ಎಂದು ಆಫ್ರಿಕಾ ಮತ್ತು ನ್ಯೂಜಿಲೆಂಡ್ ಮಂಡಳಿಗಳು ಆಟಗಾರರಿಗೆ ಪತ್ರ ನೀಡಲಿದೆ.

ಆದರೆ ಇವರು ಪಾಲ್ಗೊಳ್ಳುವುದು ಬಿಡುವುದು ಆಟಗಾರರ ವೈಯಕ್ತಿಕ ಅಭಿಪ್ರಾಯಕ್ಕೆ ಬಿಟ್ಟಿದ್ದು. ಯುಎಇನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಈ ಆಟಗಾರರು ವೈಯಕ್ತಿಕ ರಿಸ್ಕ್ ತೆಗೆದುಕೊಂಡು ಆಡುತ್ತಾರೆಯೇ ಎಂದು ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ