ಐಒಸಿ ಸದಸ್ಯೆಯಾದ ಪ್ರಥಮ ಭಾರತೀಯ ಮಹಿಳೆ ನೀತಾ ಅಂಬಾನಿ

ಶುಕ್ರವಾರ, 5 ಆಗಸ್ಟ್ 2016 (12:47 IST)
ಹೆಸರಾಂತ ಕ್ರೀಡಾ ಪ್ರವರ್ತಕಿ ಮತ್ತು ರಿಲಯನ್ಸ್ ಪ್ರತಿಷ್ಠಾನದ ಅಧ್ಯಕ್ಷೆ ನೀತಾ ಅಂಬಾನಿ ಅವರನ್ನು ಐಒಸಿಯ ಸದಸ್ಯೆಯಾಗಿ ಆಯ್ಕೆ ಮಾಡಲಾಗಿದೆ. ವಿಶ್ವದಲ್ಲಿ ಒಲಿಂಪಿಕ್ ಕ್ರೀಡೆ ನಿರ್ವಹಿಸುವ ಪ್ರತಿಷ್ಠಿತ ಸಂಸ್ಥೆಗೆ ಸೇರಿದ ಮೊದಲ ಭಾರತೀಯ ಮಹಿಳೆ ಎಂಬ ಶ್ರೇಯಕ್ಕೆ ಅವರು ಪಾತ್ರರಾಗಿದ್ದಾರೆ.
 
ಐಒಸಿ ಎಕ್ಸಿಕ್ಯೂಟಿವ್ ಮಂಡಳಿ ಜೂನ್‌ನಲ್ಲಿ ನಾಮಕರಣ ಮಾಡಿದ ಬಳಿಕ ನೀತಾ 129ನೇ ಸೆಷನ್‌ನಲ್ಲಿ ಐಒಸಿ ಸದಸ್ಯರಿಂದ ಆಯ್ಕೆಯಾಗಿದ್ದಾರೆ.
 
52 ವರ್ಷದ ನೀತಾ ಪ್ರಸಕ್ತ ಐಒಸಿಯ ವೈಯಕ್ತಿಕ ಸದಸ್ಯೆಯಾಗಿದ್ದು, 70 ವರ್ಷದವರೆಗೆ ಐಒಸಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ.
ರಿಲಯನ್ಸ್ ಪ್ರತಿಷ್ಠಾನದ ಅಧ್ಯಕ್ಷೆಯಾಗಿ ಮತ್ತು ಸಂಸ್ಥಾಪಕಿಯಾಗಿ ನೀತಾ ಶಿಕ್ಷಣ, ಕ್ರೀಡೆ, ಆರೋಗ್ಯ, ಕಲೆ ಮತ್ತು ಸಂಸ್ಕೃತಿಯ ಕ್ಷೇತ್ರಗಳಲ್ಲಿ ಉಪಕ್ರಮಗಳನ್ನು ಕೈಗೊಂಡಿದ್ದಾರೆ.
 
ದೊಡ್ಡ ಪ್ರಮಾಣದಲ್ಲಿ ಮೂಲಭೂತ ಉಪಕ್ರಮಗಳ ಮೂಲಕ ಪ್ರತಿಭೆ ಅನಾವರಣಕ್ಕೆ ಗಮನಹರಿಸುವ ಮೂಲಕ ಭಾರತದಲ್ಲಿ ಬಹು ಕ್ರೀಡೆಗಳ ಪ್ರಚಾರದಲ್ಲಿ ಅವರು ಭಾಗಿಯಾಗಿದ್ದಾರೆ. ಅವರು ಆರಂಬಿಸಿದ ಮೂಲಭೂತ ಕಾರ್ಯಕ್ರಮಗಳು ಬಹು ಕ್ರೀಡೆಗಳಲ್ಲಿ 3 ದಶಲಕ್ಷ ಮಕ್ಕಳನ್ನು ಮುಟ್ಟಿದೆ. ನೀತಾ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ರೂವಾರಿ ಕೂಡ ಆಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ