ಸಕ್ಸಸ್ ಕೊಟ್ಟಿದ್ದಕ್ಕೆ ದೇವರಿಗೆ ಥ್ಯಾಂಕ್ಸ್: ಮೊಣಕಾಲಿನಲ್ಲಿ ತಿರುಪತಿ ಮೆಟ್ಟಿಲು ಹತ್ತಿದ ಟೀಂ ಇಂಡಿಯಾ ಕ್ರಿಕೆಟಿಗ (ವಿಡಿಯೋ)

Krishnaveni K

ಮಂಗಳವಾರ, 14 ಜನವರಿ 2025 (11:58 IST)
Photo Credit: X
ಹೈದರಾಬಾದ್: ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಶತಕ ಸೇರಿದಂತೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದ ಟೀಂ ಇಂಡಿಯಾ ಯವ ಕ್ರಿಕೆಟಿಗರ ನಿತೀಶ್ ಕುಮಾರ್ ರೆಡ್ಡಿ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಮೊಣಕಾಲಿನಲ್ಲಿ ಬೆಟ್ಟ ಹತ್ತುವ ಮೂಲಕ ಹರಕೆ ತೀರಿಸಿದ್ದಾರೆ.

ಮೂಲತಃ ಆಂಧ್ರದವಾರದ ನಿತೀಶ್ ಕುಮಾರ್ ರೆಡ್ಡಿ ಭಾರತ ತಂಡಕ್ಕೆ ಆಸ್ಟ್ರೇಲಿಯಾ ಸರಣಿಯಲ್ಲಿ ಸಿಕ್ಕ ಶ್ರೇಷ್ಠ ಯುವ ಆಟಗಾರರಾಗಿದ್ದರು. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದು ಅನೇಕ ಬಾರಿ ಆಪತ್ ಬಾಂಧವರಾಗಿದ್ದಾರೆ. ಈ ಸರಣಿ ಬಳಿಕ ನಿತೀಶ್ ಖ್ಯಾತಿ ಹೆಚ್ಚಾಗಿದೆ.

ಈ ಸಕ್ಸಸ್ ಸಿಕ್ಕ ಬೆನ್ನಲ್ಲೇ ನಿತೀಶ್ ತಿಮ್ಮಪ್ಪನ ಹರಕೆ ತೀರಿಸಿದ್ದಾರೆ. ತಿಮ್ಮಪ್ಪನ ಬೆಟ್ಟವನ್ನು ಮೊಣಕಾಲಿನಲ್ಲಿ ಹತ್ತಿ ತಮ್ಮ ಹರಕೆ ತೀರಿಸಿದ್ದಾರೆ. ಈ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಿತೀಶ್ ತೀರಾ ಕಷ್ಟದಿಂದ ಮೇಲೆ ಬಂದವರು. ಅವರ ಕ್ರಿಕೆಟ್ ಬದುಕಿಗಾಗಿ ತಂದೆ ತಮ್ಮ ಉದ್ಯೋಗವನ್ನೂ ತ್ಯಾಗ ಮಾಡಿದ್ದರು. ಆ ಪರಿಶ್ರಮಕ್ಕೆ ತಕ್ಕ ಫಲ ಅವರಿಗೆ ಆಸ್ಟ್ರೇಲಿಯಾ ಸರಣಿಯಲ್ಲಿ ಸಿಕ್ಕಿತ್ತು. ಆ ಸಕ್ಸಸ್ ಗೆ ಈಗ ದೇವರಿಗೆ ಋಣ ಸಂದಾಯ ಮಾಡಿದ್ದಾರೆ.

Nitish Kumar Reddy is taking blessing from Tirupati Balaji after BG trophy !
????
BCCI #Ashes INDvsENG #nitishkumarreddy #MakarSankranti #महाकुम्भ_अमृत_स्नान लोक आस्था #मकर_संक्रांति Gyan Ganga #WWERaw Yograj Singh pic.twitter.com/UwKlldTvOC

— Sahil Khanna (@SahilKh83593460) January 14, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ