ಭಾರತದ ಕ್ರಿಕೆಟ್ ತಂಡದ ಸದಸ್ಯನಿಂದ ಅತ್ಯಾಚಾರ; ಆರೋಪದಲ್ಲಿ ಹುರುಳಿಲ್ಲ: ಠಾಕುರ್

ಸೋಮವಾರ, 20 ಜೂನ್ 2016 (16:47 IST)
ಜಿಂಬಾಬ್ವೆ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ಸದಸ್ಯರೊಬ್ಬರು ಟೀಂ ಹೊಟೆಲ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದಾರೆಂಬ ಆಘಾತಕಾರಿ ಸುದ್ದಿ ಭಾರತದ ಮಾಧ್ಯಮದಲ್ಲಿ ಪ್ರಕಟವಾದ ಬಳಿಕ, ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕುರ್ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ವರದಿಯನ್ನು ತಳ್ಳಿಹಾಕಿದ್ದಾರೆ.
 
ಭಾರತ ತಂಡ ಯಾರೊಬ್ಬರೂ ಈ ಘಟನೆಯಲ್ಲಿ ಭಾಗಿಯಾಗಿಲ್ಲ ಎಂದು ಜಿಂಬಾಬ್ವೆಗೆ ಭಾರತದ ರಾಯಭಾರಿ ಕೂಡ ಸ್ಪಷ್ಟೀಕರಣ ನೀಡಿದ್ದಾರೆ. 
 
 ಜಿಂಬಾಬ್ವೆ ವೆಬ್‌‍ಸೈಟ್‌ನಲ್ಲಿ ಇದಕ್ಕೆ ಮುಂಚೆ ಪ್ರಕಟವಾದ ವರದಿಯಲ್ಲಿ ಭಾರತ ತಂಡದ ಸದಸ್ಯರೊಬ್ಬರನ್ನು ಜಿಂಬಾಬ್ವೆ ಮಹಿಳೆ ಮೇಲೆ ರೇಪ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಹೇಳಲಾಗಿತ್ತು.  ಕೇಂದ್ರ ಹರಾರೆಯ ಮೈಕ್ಲೇಸ್ ಹೊಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಸಹಾಯಕ ಪೊಲೀಸ್ ಆಯುಕ್ತ ಚಾರಿಟಿ ಚಾರಂಬಾ ಈ ಸುದ್ದಿಯನ್ನು ದೃಢೀಕರಿಸಿದ್ದರು.
 
ಕಳೆದ ವಾರ ಆಗಮಿಸಿದ ಬ್ಯಾಚ್‌ನ ಭಾರತೀಯ ಪೌರನತ್ತ ಸಂತ್ರಸ್ತೆ ಬೊಟ್ಟು ಮಾಡಿದ್ದು, ಅತ್ಯಾಚಾರವೆಸಗಿದ್ದು ಆಟಗಾರ ಅಥವಾ ಅಧಿಕಾರಿ ಎಂದು ಬಹಿರಂಗಮಾಡುವ ಸ್ಥಿತಿಯಲ್ಲಿ ನಾವಿಲ್ಲ.ಆದರೆ ಆರೋಪಿ ಶನಿವಾರ ಕೋರ್ಟ್‌ಗೆ ಹಾಜರಾಗಿದ್ದನ್ನು ನಾನು ಖಚಿತಪಡಿಸುತ್ತೇನೆ ಎಂದು ಚಾರಂಬಾ ಹೇಳಿದರು.  ನಾವು ತನಿಖೆಯನ್ನು ಪೂರ್ಣಗೊಳಿಸಿದ್ದು, ಪೊಲೀಸ್ ಮತ್ತು ಕೋರ್ಟ್ ಈ ವಿಷಯವನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ಏಕೆಂದರೆ ಇದು ರಾಜತಾಂತ್ರಿಕ ವೈಮನಸ್ಯಕ್ಕೆ ದಾರಿಯಾಗಬಹುದು ಎಂದು ಅವರು ಹೇಳಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ