ರಿಯೊ ಒಲಿಂಪಿಕ್ ಟೆನ್ನಿಸ್‌ನಲ್ಲಿ ಜೋಕೋವಿಕ್, ಮರ್ರೆ, ಫೆಡರರ್, ನಡಾಲ್, ಸೆರೆನಾ

ಶುಕ್ರವಾರ, 22 ಜುಲೈ 2016 (16:47 IST)
ನೋವಾಕ್ ಜೋಕೊವಿಕ್, ಆಂಡಿ ಮರ್ರೆ, ರೋಜರ್ ಫೆಡರರ್, ರಾಫೆಲ್ ನಡಾಲ್ ಟೆನ್ನಿಸ್‌ನ ಘಟಾನುಗಟಿಗಳು ಮತ್ತು ಸೆರೆನಾ ವಿಲಿಯಮ್ಸ್ ಮಹಿಳಾ ಟೆನ್ನಿಸ್‌ನ ಸೂಪರ್ ಸ್ಟಾರ್ ರಿಯೊದಲ್ಲಿ ಪದಕದ ಫೇವರಿಟ್‌ಗಳ ಪಟ್ಟಿಯದ್ದಾರೆ.

ಮರ್ರೆ ಮತ್ತು ವಿಲಿಯಂಸ್ ಹಾಲಿ ಚಾಂಪಿಯನ್ನರಾಗಿದ್ದರೆ ನಡಾಲ್ 2008ರ ಬೀಜಿಂಗ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು. ಆದರೆ ಅತೀ ಪ್ರಮುಖ ಆಟಗಾರರಾದ ಮಿಲೋಸ್ ರಾವೊನಿಕ್ ಥಾಮಸ್ ಬರ್ಡೈಕ್ ಮತ್ತು ಡಾಮಿನಿಕ್ ಥೀಮ್ ಜೀಕಾ ವೈರಸ್ ಭಯದಿಂದ ಅಥವಾ ಯುಎಸ್ ಓಪನ್‌ಗೆ ವೇಳಾಪಟ್ಟಿಯ ಸಮಸ್ಯೆಗಳಿಂದ ಭಾಗವಹಿಸುತ್ತಿಲ್ಲ.

ಮಾರಿಯಾ ಶರಪೋವಾ ಉದ್ದೀಪನ ಮದ್ದು ಸೇವನೆ ನಿಷೇಧದಿಂದ ಭಾಗವಹಿಸುತ್ತಿಲ್ಲ.  ವಿಕ್ಟೋರಿಯಾ ಅಜರೆಂಕಾ ಮಗುವಿನ ನಿರೀಕ್ಷೆಯಲ್ಲಿದ್ದು ಭಾಗವಹಿಸುತ್ತಿಲ್ಲ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ