ಏಕದಿನ ವಿಶ್ವಕಪ್: ಚೆನ್ನೈನ ತಿರುವಿನ ಪಿಚ್ ನಲ್ಲಿ ಕಿವೀಸ್ ಗೆ ತಿರುಗಿ ಬೀಳುತ್ತಾ ಬಾಂಗ್ಲಾ?
ನ್ಯೂಜಿಲೆಂಡ್ ಇದುವರೆಗೆ ಆಡಿದ ಎರಡೂ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಈ ಬಾರಿ ಚೆನ್ನೈನ ಸ್ಪಿನ್ ಸ್ನೇಹಿ ಪಿಚ್ ನಲ್ಲಿ ಕಿವೀಸ್ ಹಿಂದಿನ ಪಂದ್ಯಗಳಂತೇ ಅಬ್ಬರಿಸುತ್ತಾ ಕಾದು ನೋಡಬೇಕಿದೆ. ತಂಡದಲ್ಲಿ ರಚಿನ್ ರವೀಂದ್ರ, ವಿಲ್ ಯಂಗ್ ಈಗಾಗಲೇ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದಾರೆ. ಜೊತೆಗೆ ಬೌಲಿಂಗ್ ನಲ್ಲೂ ಸ್ಯಾಂಟ್ನರ್, ಟ್ರೆಂಟ್ ಬೌಲ್ಟ್ ನಂತಹ ಘಟಾನುಘಟಿಗಳಿದ್ದಾರೆ.
ಆದರೆ ಬಾಂಗ್ಲಾ ಕಳೆದ ಎರಡು ಪಂದ್ಯಗಳನ್ನು ಸೋತರೂ ಚೆನ್ನೈ ಪಿಚ್ ನಲ್ಲಿ ನಾಯಕ ಶಕೀಬ್ ಅಲ್ ಹಸನ್ ಸ್ಪಿನ್ ಬೌಲಿಂಗ್ ಪ್ರಮುಖ ಪಾತ್ರ ವಹಿಸಲಿದೆ. ಆದರೆ ತಂಡದ ಬ್ಯಾಟಿಂಗ್ ಕಳೆಗುಂದಿರುವುದು ಬಾಂಗ್ಲಾಗೆ ತಲೆನೋವಾಗಿದೆ. ಈ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.