ಪಾಕ್ ಕ್ರಿಕೆಟಿಗರ ಮುಂದೆ ನಮ್ಮ ಹುಡುಗಿಯರು ಕುಣಿಯಬೇಕೇ?!
ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಅಕ್ಟೋಬರ್ 14 ರಂದು ಅಹಮ್ಮದಾಬಾದ್ ನಲ್ಲಿ ಪಂದ್ಯವಾಡಲಿದೆ. ಈ ಪಂದ್ಯಕ್ಕಾಗಿ ಪಾಕ್ ಕ್ರಿಕೆಟಿಗರು ಅಹಮ್ಮದಾಬಾದ್ ಗೆ ಬಂದಿಳಿದಾಗ ಅವರಿಗೆ ಡೋಲು ಬಡಿದು ಭಾರತೀಯ ನಾರಿಯರು ನೃತ್ಯ ಮಾಡಿ ಸ್ವಾಗತ ಕೋರಿದ್ದರು.
ಇದು ಕೆಲವು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಸದಾ ನಮ್ಮ ವಿರುದ್ಧ ಕತ್ತಿ ಮಸೆಯುವ ಪಾಕಿಸ್ತಾನ ದೇಶದ ಕ್ರಿಕೆಟಿಗರ ಮುಂದೆ ನಮ್ಮ ಹುಡುಗಿಯರು ಕುಣಿಯಬೇಕೇ? ಅದೇ ನಮ್ಮ ದೇಶದ ಕ್ರಿಕೆಟಿಗರು ಅಥವಾ ಬೇರೆ ಯಾವುದೇ ದೇಶದ ಕ್ರಿಕೆಟಿಗರಿಗೆ ಇಂತಹ ಸ್ವಾಗತ ಯಾಕಿಲ್ಲ? ಎಂದು ನೆಟ್ಟಿಗರು ಬಿಸಿಸಿಐನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.