ಏಕದಿನ ವಿಶ್ವಕಪ್: ಭಾರತ-ಪಾಕ್ ಪಂದ್ಯಕ್ಕೆ ಮುನ್ನ ಭರ್ಜರಿ ಎಂಟರ್ ಟೈನ್ ಮೆಂಟ್
ಶುಕ್ರವಾರ, 13 ಅಕ್ಟೋಬರ್ 2023 (09:10 IST)
ಅಹಮ್ಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಎಲ್ಲರೂ ಎದಿರು ನೋಡುತ್ತಿದ್ದ ಭಾರತ-ಪಾಕಿಸ್ತಾನ ಪಂದ್ಯ ಇದೇ ಶನಿವಾರ ಗುಜರಾತ್ ನ ಅಹಮ್ಮದಾಬಾದ್ ಮೈದಾನದಲ್ಲಿ ನಡೆಯಲಿದೆ.
ಈ ಪಂದ್ಯಕ್ಕೆ ಈಗಾಗಲೇ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ಸಾಂಪ್ರದಾಯಿಕ ಎದುರಾಳಿಗಳ ಪಂದ್ಯ ಭಾರತದಂತಹ ಕ್ರಿಕೆಟ್ ನ್ನು ಧರ್ಮದಂತೆ ಪ್ರೀತಿಸುವ ಪ್ರೇಕ್ಷಕರ ಮುಂದೆ ನಡೆಯುತ್ತಿರುವುದರಿಂದ ಉತ್ಸಾಹವೂ ಅದೇ ಮಟ್ಟದಲ್ಲಿದೆ.
ಈ ನಡುವೆ ವಿಶ್ವಕಪ್ ಆಯೋಜಕರಾಗಿರುವ ಬಿಸಿಸಿಐ ಈ ಪಂದ್ಯಕ್ಕೆ ವಿಶೇಷ ಕಳೆ ನೀಡಲು ಸಿದ್ಧತೆ ನಡೆಸಿದೆ. ಏಕದಿನ ವಿಶ್ವಕಪ್ ಉದ್ಘಾಟನಾ ಪಂದ್ಯದ ದಿನವೂ ಬಿಸಿಸಿಐ ಯಾವುದೇ ಮನರಂಜನಾ ಕಾರ್ಯಕ್ರಮ ಆಯೋಜಿಸಿರಲಿಲ್ಲ. ಆದರೆ ಭಾರತ-ಪಾಕ್ ಪಂದ್ಯಕ್ಕೆ ಮುನ್ನ ಮನರಂಜನಾ ಕಾರ್ಯಕ್ರಮ ಆಯೋಜಿಸಿದೆ. ಮಧ‍್ಯಾಹ್ನ 12.40 ರಿಂದ 1.10 ರವರೆಗೆ ಬಾಲಿವುಡ್ ಕಲಾವಿದರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಬಾಲಿವುಡ್ ಸಿಂಗರ್ ಅರ್ಜಿತ್ ಸಿಂಗ್, ಶಂಕರ್ ಮಹದೇವನ್ ಮುಂತಾದವರು ತಮ್ಮ ಹಾಡಿನ ಮೂಲಕ ಪ್ರೇಕ್ಷಕರ ಜೋಶ್ ಹೆಚ್ಚಿಸಲಿದ್ದಾರೆ. ಜೊತೆಗೆ ವಿಶ್ವಕಪ್ ಪಂದ್ಯಾವಳಿಗೆ ಬಿಸಿಸಿಐನಿಂದ ಗೋಲ್ಡನ್ ಟಿಕೆಟ್ ಗೌರವ ಪಡೆದಿದ್ದ ಸಚಿನ್ ತೆಂಡುಲ್ಕರ್, ರಜನೀಕಾಂತ್, ಅಮಿತಾಭ್ ಬಚ್ಚನ್ ಈ ಪಂದ್ಯದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.