ವೆಡ್ಡಿಂಗ್ ರಿಂಗ್, ಪಾಸ್ ಪೋರ್ಟ್ ಕೂಡಾ ಮರೆತಿದ್ದ ರೋಹಿತ್ ಶರ್ಮಾ!
ಆದರೆ ರೋಹಿತ್ ಈ ರೀತಿ ಮರೆಯವುದು ಇದೇ ಮೊದಲಲ್ಲ. ಹಲವು ಬಾರಿ ರೋಹಿತ್ ಶರ್ಮಾ ತಮ್ಮ ಪರ್ಸನಲ್ ವಸ್ತುಗಳನ್ನೂ ಮರೆತು ಫಜೀತಿಗೊಳಗಾಗಿದ್ದಿದೆ. ಅದಕ್ಕೆ ಅವರು ಟೀಂ ಇಂಡಿಯಾ ಘಜನಿ ಎಂದೇ ಕರೆಯಿಸಿಕೊಳ್ಳುತ್ತಾರೆ.
ರೋಹಿತ್ ಹಿಂದೊಮ್ಮೆ ತಮ್ಮ ಪತ್ನಿ ರಿತಿಕಾ ನೀಡಿದ್ದ ವೆಡ್ಡಿಂಗ್ ಉಂಗುರವನ್ನೂ ಹೋಟೆಲ್ ನಲ್ಲಿ ಮರೆತು ಬಂದಿದ್ದರು. ಇನ್ನು ಕೆಲವೊಮ್ಮೆ ಪಾಸ್ ಪೋರ್ಟ್, ಐಪ್ಯಾಡ್ ಗಳನ್ನೂ ಮರೆತು ನಡೆದಿದ್ದೆಯಂತೆ. ಆಗೆಲ್ಲಾ ಅವರು ಫಜೀತಿ ಅನುಭವಿಸಿದ್ದಿದೆ. ರಿತಿಕಾ ಹಿಂದೊಮ್ಮೆ ಸಂದರ್ಶನದಲ್ಲಿ ರೋಹಿತ್ ಮರೆಗುಳಿತನದ ಬಗ್ಗೆ ಹೇಳಿಕೊಂಡಿದ್ದರು. ಇದೀಗ ರೋಹಿತ್ ಮರೆಗುಳಿತನ ವಿಶ್ವದ ಮುಂದೆ ಜಾಹೀರಾಗಿದೆ.