ಟಿಕೆಟ್..ಟಿಕೆಟ್...! ವಿಶ್ವಕಪ್ ಕ್ರಿಕೆಟ್ ಗೆ ಟಿಕೆಟ್ ಮಾರಾಟ ಶುರು

ಬುಧವಾರ, 20 ಮಾರ್ಚ್ 2019 (08:57 IST)
ದುಬೈ: ಇಂಗ್ಲೆಂಡ್ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯಗಳಿಗೆ ಟಿಕೆಟ್ ಮಾರಾಟ ಆನ್ ಲೈನ್ ನಲ್ಲಿ ನಾಳೆಯಿಂದ ಶುರುವಾಗುತ್ತಿದೆ.


ಅಫೀಷಿಯಲ್ ಸಿಡಬ್ಲ್ಯುಸಿ2019 ಟಿಕೆಟಿಂಗ್ ವೆಬ್ ಸೈಟ್ ನಲ್ಲಿ ಆನ್ ಲೈನ್ ಟಿಕೆಟ್ ಬುಕಿಂಗ್ ಮಾಡಬಹುದು. ಇಂಗ್ಲೆಂಡ್ ನಲ್ಲಿ ನಡೆಯಲಿರುವ ಪಂದ್ಯಾವಳಿಯ ಟಿಕೆಟ್ ಗೆ ಭಾರೀ ಬೇಡಿಕೆಯಿದೆ ಎಂದು ಐಸಿಸಿ ಹೇಳಿದೆ.

ಅದರಲ್ಲೂ ವಿಶೇಷವಾಗಿ ಜೂನ್ 16 ರಂದು ಮ್ಯಾಂಚೆಸ್ಟರ್ ನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಟಿಕೆಟ್ ಗಾಗಿ ಭಾರೀ ಬೇಡಿಕೆ ಬಂದಿದೆ ಎನ್ನಲಾಗಿದೆ. ಒಟ್ಟು 25 ಸಾವಿರ ಆಸನಗಳ ಟಿಕೆಟ್ ಗೆ 40 ಸಾವಿರಕ್ಕೂ ಅಧಿಕ  ಅಪ್ಲಿಕೇಷನ್ ಬಂದಿದೆ ಎಂದು ಐಸಿಸಿ ಹೇಳಿದೆ. ಇನ್ನು, ಆನ್ ಲೈನ್ ನಲ್ಲಿ ಟಿಕೆಟ್ ಬುಕಿಂಗ್ ನಲ್ಲಿ ನಡೆಯುವ ವಂಚನೆ ತಡೆಗಟ್ಟಲೂ ವಿಶೇಷ ಕ್ರಮ ಕೈಗೊಳ್ಳಲಾಗಿದೆ ಎಂದು ಐಸಿಸಿ ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ