ನಮ್ಮ ಬೌಲರ್‌ಗಳು ಇನ್ನೂ ಕಲಿಕೆಯ ಹಂತದಲ್ಲಿ : ವಿಂಡೀಸ್ ಬೌಲಿಂಗ್ ಕೋಚ್

ಶನಿವಾರ, 23 ಜುಲೈ 2016 (12:56 IST)
ಬೌಲಿಂಗ್‌ನಲ್ಲಿ ನೀರಸ ಪ್ರದರ್ಶನ ನೀಡಿದ ತಮ್ಮ ಬೌಲರುಗಳನ್ನು ಸಮರ್ಥಿಸಿಕೊಂಡ ವೆಸ್ಟ್ ಇಂಡೀಸ್ ಕೋಚ್ ರಾಡ್ಡಿ ಎಸ್ಟ್‌ವಿಕ್ ತಮ್ಮ ಬೌಲರುಗಳು ಇನ್ನೂ ಕಲಿಯುತ್ತಿದ್ದಾರೆಂದು ಹೇಳಿದರು. ಭಾರತದ ನಾಯಕ ವಿರಾಟ್ ಕೊಹ್ಲಿ ಚೊಚ್ಚಲ ದ್ವಿಶತಕವನ್ನು ಸ್ಕೋರ್ ಮಾಡಿದ್ದು, ರವಿಚಂದ್ರನ್ ಅಶ್ವಿನ್ ಕೂಡ ಶತಕ ಸಿಡಿಸಿ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ.

ಇದು ಬ್ಯಾಟಿಂಗ್‌ಗೆ ಉತ್ತಮ ವಿಕೆಟ್ ಆಗಿದೆ. ಆದರೂ ಕೂಡ ಬೌಲಿಂಗ್ ದಾಳಿಯಲ್ಲಿ ಜೆರೋಮ್ ಟೇಲರ್ ನಿವೃತ್ತಿಯಿಂದ ಮತ್ತು ಆಯ್ಕೆಯಾಗಿರದ ಕೇಮಾರ್ ರೋಚ್ ಅವರನ್ನು ಕಳೆದುಕೊಂಡೆವು. ನಮ್ಮ ಬೌಲಿಂಗ್ ದಾಳಿಯ ಕಡೆ ಕಣ್ಣುಹಾಯಿಸಿದಾಗ, ಪ್ರಸಕ್ತ ಬೌಲರುಗಳು ಇನ್ನೂ ಬೌಲಿಂಗ್ ಕಲೆ ಕಲಿಯುತ್ತಿದ್ದು, ಸೂಕ್ತ ಸಂಯೋಜನೆಗೆ ಯತ್ನಿಸುತ್ತಿದ್ದಾರೆ. ಆದ್ದರಿಂದ ಇದೊಂದು ಸುದೀರ್ಘ ಹೋರಾಟ ಎಂದು ಪ್ರತಿಕ್ರಿಯಿಸಿದರು.
 
 ಭಾರತ ಉತ್ತಮ ಬ್ಯಾಟಿಂಗ್ ತಂಡವಾಗಿದ್ದು, ಇದೊಂದು ಕಠಿಣ ಸರಣಿಯಾಗಲಿದೆ ಎಂದು ಎಸ್ಟ್ವಿಕ್ ಅಭಿಪ್ರಾಯಪಟ್ಟರು. ವೆಸ್ಟ್ ಇಂಡೀಸ್ ಬೌಲರುಗಳು ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕೂಡ ನಿಯಂತ್ರಿಸಲು ಏಕೆಸಾಧ್ಯವಾಗಿಲ್ಲ ಎನ್ನುವುದಕ್ಕೆ ಎಸ್ಟ್‌ವಿಕ್ ನೋವಿನಿಂದ ಉತ್ತರಿಸಿದರು.

ಅಮಿತ್ ಮಿಶ್ರಾ ಕೂಡ ಬಿರುಸಿನ ಅರ್ಧಶತಕ ಸ್ಕೋರ್ ಮಾಡಿದ್ದರು. ಇದೊಂದು ಉತ್ತಮ ಬ್ಯಾಟಿಂಗ್ ಪಿಚ್ ಆಗಿದ್ದು, ನೀವು 4ಕ್ಕೆ 400 ರನ್ ಗಳಿಸಿದಾಗ ಕೆಳಕ್ರಮಾಂಕದ ಆಟಗಾರರು ಕೂಡ ಮುಕ್ತವಾಗಿ ಆಡುತ್ತಾರೆ. ನೀವು ಆ ಸ್ಕೋರನ್ನು ಮುಟ್ಟಿದಾಗ ಶಾಟ್ ಹೊಡೆಯುವುದಕ್ಕೆ ಪರವಾನಗಿ ಸಿಕ್ಕಿದ ಹಾಗಾಗುತ್ತದೆ ಮತ್ತು ಬ್ಯಾಟ್ಸ್‌ಮನ್ ಮೇಲೆ ಒತ್ತಡ ಇರುವುದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ