ನೀವು ಬರದೇ ಇದ್ರೆ ನಾವೂ ಬರಲ್ಲ! ಟೀಂ ಇಂಡಿಯಾಗೆ ಬೆದರಿಕೆ ಹಾಕಿದ ಪಾಕ್

ಬುಧವಾರ, 19 ಅಕ್ಟೋಬರ್ 2022 (09:50 IST)
ಮುಂಬೈ: ಏಷ್ಯಾ ಕಪ್ 2023 ರ ಪಾಕಿಸ್ತಾನದಲ್ಲಿ ನಡೆದರೆ ಟೀಂ ಇಂಡಿಯಾ ಕಳುಹಿಸಲ್ಲ ಎಂದಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆ ಪಾಕ್ ಆಕ್ರೋಶಕ್ಕೆ ಕಾರಣವಾಗಿದೆ.

ಜಯ್ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ರಮೀಜ್ ರಾಜಾ ನೀವು ಬರದೇ ಇದ್ದರೆ ನಾವೂ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಕೂಟದಿಂದ ನಮ್ಮ ತಂಡವನ್ನು ಹಿಂದೆ ಪಡೆಯಬೇಕಾಗುತ್ತದೆ ಎಂದಿದ್ದಾರೆ.

‘ಪಾಕಿಸ್ತಾನ ಪಾಲ್ಗೊಳ್ಳದೇ ಇದ್ದರೂ ಐಸಿಸಿ, ಎಸಿಸಿ ವ್ಯಾವಹಾರಿಕವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ನಾವೂ ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿದ್ದೇವೆ. ಬಿಸಿಸಿಐ ಕಾರ್ಯದರ್ಶಿ ನೀಡಿರುವ ಹೇಳಿಕೆಯನ್ನು ಮುಂದಿನ ತಿಂಗಳ ನಡೆಯಲಿರುವ ಐಸಿಸಿ ಸಭೆಯಲ್ಲಿ ನಾವು ಪ್ರಸ್ತಾಪಿಸಲಿದ್ದೇವೆ’ ಎಂದಿದ್ದಾರೆ.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ