Rohit Sharma: ಅಯ್ಯೋ.. ನಾನೇ ಕಟ್ಟಿದ ಕೋಟೆ ನನ್ನೆದುರಲ್ಲೇ ಒಡೆದೇ ಹೋಯ್ತಲ್ಲಾ

Krishnaveni K

ಗುರುವಾರ, 23 ಅಕ್ಟೋಬರ್ 2025 (18:08 IST)
Photo Credit: X

ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಸೋಲಿನ ಹತಾಶೆಯಲ್ಲಿ ರೋಹಿತ್ ಶರ್ಮಾ ನೀಡಿದ ಮುಖಭಾವ ನೋಡಿದರೆ ನಾನೇ ಕಟ್ಟಿದ ಕೋಟೆ ನನ್ನೆದುರೇ ಒಡೆದೇ ಹೋಯ್ತು ಎನ್ನುವಂತಿತ್ತು.

ರೋಹಿತ್ ಶರ್ಮಾ ನಾಯಕರಾಗಿದ್ದಾಗ ಟೀಂ ಇಂಡಿಯಾ ಬಿಳಿ ಚೆಂಡಿನ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿತ್ತು. ಆದರೆ ಗಂಭೀರ್ ಮತ್ತು ಅಗರ್ಕರ್ ಭವಿಷ್ಯದ ದೃಷ್ಟಿಯಿಂದ ಎಂದು ನೆಪ ಹೇಳಿ ರೋಹಿತ್ ರನ್ನು ನಾಯಕತ್ವದಿಂದ ಕಿತ್ತು ಹಾಕಿ ಶುಭಮನ್ ಗಿಲ್ ಗೆ ಹೊಣೆ ನೀಡಿದರು.

ಈಗ ರೋಹಿತ್ ಕೇವಲ ಆಟಗಾರನಾಗಿ ತಂಡದಲ್ಲಿದ್ದಾರೆ. ಅದೂ ರನ್ ಗಳಿಸದೇ ಇದ್ದರೆ ತಂಡದಿಂದ ಕಿಕ್ ಔಟ್ ಮಾಡುವುದಾಗಿ ಅಜಿತ್ ಅಗರ್ಕರ್ ಎಚ್ಚರಿಕೆಯನ್ನೂ ನೀಡಿದ್ದರು. ವಿಪರ್ಯಾಸವೆಂದರೆ ಇಂದಿನ ಪಂದ್ಯದಲ್ಲಿ ತಂಡಕ್ಕೆ ಗರಿಷ್ಠ ಮೊತ್ತ ಸ್ಕೋರ್ ಮಾಡಿದ್ದೇ ರೋಹಿತ್ ಶರ್ಮಾ.

ಹಾಗಿದ್ದರೂ ಎರಡನೇ ಏಕದಿನ ಪಂದ್ಯವನ್ನು 2 ವಿಕೆಟ್ ಗಳಿಂದ ಸೋತ ಬಳಿಕ ರೋಹಿತ್ ಸಪ್ಪೆ ಮುಖ ಮಾಡಿಕೊಂಡು ನಿಂತಿದ್ದರು. ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ