ಭಾರತದ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅಬ್ಬರಿಸಿದರೂ ಆದರೂ ಕಾಂಗರೂ ನೆಲದಲ್ಲಿ ಸತತ ಎರಡನೇ ಏಕದಿನ ಪಂದ್ಯವನ್ನು ಭಾರತ ಸೋತು ಸರಣಿಯನ್ನು ಕಳೆದುಕೊಂಡಿತು. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಒಂದು ರನ್ ಸೋತಿದ್ದ ಭಾರತ ತಂಡಕ್ಕೆ ಈ ಪಂದ್ಯ ಸರಣಿಯನ್ನು ಜೀವಂತವಾಗಿ ಉಳಿಸಿಕೊಳ್ಳಲು ಈ ಪಂದ್ಯ ನಿರ್ಣಾಯಕವಾಗಿತ್ತು. ಆದರೆ ರೋಚಕವಾಗಿದ್ದ ಈ ಪಂದ್ಯವನ್ನು ಸೋತಿತು.
ಅಡಿಲೇಡ್ ಓವಲ್‌ನಲ್ಲಿ ಭಾರತವನ್ನು 2 ವಿಕೆಟ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೊದಲು ರೋಹಿತ್ ಶರ್ಮಾ 73 ರನ್, ಶ್ರೇಯಸ್ ಅಯ್ಯರ್ 61 ರನ್, ಅಕ್ಷರ್ ಪಟೇಲ್ 44 ರನ್ ಗಳಿಸಿ ಭಾರತ 264/9 ಸ್ಕೋರ್ ಮಾಡಲು ಸಹಾಯ ಮಾಡಿದರು.
ಅಗತ್ಯವಿದ್ದ 265 ರನ್‌ಗಳ ಗುರಿಯನ್ನು ಆಸೀಸ್ ಇನ್ನೂ 22 ಎಸೆತಗಳು ಬಾಕಿ ಇರುವಂತೆಯೇ 8ವಿಕೆಟ್ ಗುರಿ ತಲುಪಿ, ಜಯ ಸಾಧಿಸಿತು.
ಈ ವರ್ಷದಲ್ಲಿ ಸತತ 8 ಏಕದಿನ ಪಂದ್ಯವೂ ಗೆದ್ದಿದ್ದ ಭಾರತ ತಂಡವೂ 441 ದಿನಗಳಲ್ಲಿ ಮೊದಲ ಬಾರಿಗೆ ಭಾರತ ಎರಡು ಏಕದಿನ ಪಂದ್ಯಗಳನ್ನು ಬ್ಯಾಕ್ ಟು ಬ್ಯಾಕ್ ಸೋತಿದೆ. ಇನ್ನೂ ವಿರಾಟ್ ಕೊಹ್ಲಿ ಸತತ ಎರಡನೇ ಪಂದ್ಯದಲ್ಲೂ ಸೊನ್ನೆಗೆ ಔಟ್ ಆಗುವ ಮೂಲಕ, ಮತ್ತೊಮ್ಮೆ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಾರೆ.
ಇದಕ್ಕೂ ಮುನ್ನ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಅರ್ಧಶತಕ ಸಿಡಿಸಿದರೆ, ಅಕ್ಷರ್ 44 ರನ್ ಸಿಡಿಸಿದ್ದರು. ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಸಿಂಗ್ 9ನೇ ವಿಕೆಟ್ ಜೊತೆಯಾಟದಲ್ಲಿ 37 ರನ್ ಗಳಿಸಿದರು. ಬೌಲರ್‌ಗಳಲ್ಲಿ ಆಡಮ್ ಝಂಪಾ ಅವರು 4 ವಿಕೆಟ್‌ಗಳನ್ನು ಕಬಳಿಸಿದರು.