ಸಲಾಮ್ ಕ್ರಿಕೆಟ್ 2018 ರ ಸಭೆಯಲ್ಲಿ ಉಪಸ್ತಿತರಿದ್ದ ಹರಭಜನ್ ಟೀಂ ಇಂಡಿಯಾ ಏಷ್ಯಾಕಪ್ ಗೆಲ್ಲುವ ಫೇವರಿಟ್ ಎಂದಿದ್ದಾರೆ. "ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿಯೂ ಸಹ ಭಾರತ ಫೇವರಿಟ್ ಆಗಿದೆ. ಭಾರತದ ಬ್ಯಾಟಿಂಗ್ ಉತ್ತಮವಾಗಿದೆ. ಏಷ್ಯಾದ ಪರಿಸ್ಥಿತಿಗಳಲ್ಲಿ, ಭಾರತದ ಬ್ಯಾಟ್‌ಮೆನ್‌ಗಳನ್ನು ಔಟ್ ಮಾಡುವುದು ಕಷ್ಟ. ಕೇವಲ ಅವರ ಬ್ಯಾಟಿಂಗ್ ಅಲ್ಲ ಅವರ ಬೌಲಿಂಗ್‌ನಲ್ಲಿಯೂ ಆಳವಿದೆ. ಕುಲದೀಪ್ ಯಾದವ್ ಭಾರತಕ್ಕೆ ಟ್ರಂಪ್ ಕಾರ್ಡ್ ಆಗಲಿದ್ದಾರೆ" ಎಂದು ತಮ್ಮ ಅಭಿಪ್ರಾಯವನ್ನು ಬಜ್ಜಿ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿಯ ಅಲಭ್ಯತೆಯಿಂದಾಗಿ ರೋಹಿತ್ ಶರ್ಮಾ ಏಷ್ಯಾ ಕಪ್‌ನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈಗಾಗಲೇ 2018 ರ ನಿದಾಹಾಸ್ ಟ್ರೋಫಿಯಲ್ಲಿ ರೋಹಿತ್ ನಾಯಕನಾಗಿ ಭಾರತದ ತಂಡವನ್ನು ಮುನ್ನಡೆಸಿದ್ದಲ್ಲದೇ ಗೆಲುವನ್ನೂ ತಂದುಕೊಟ್ಟಿದ್ದಾರೆ. ಇಂದಿನ ಭಾರತ ಮತ್ತು ಪಾಕಿಸ್ಥಾನದ ಪಂದ್ಯ ಮುಖ್ಯವಾಗಿದ್ದು ಅದಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ಕಾದುನಿಂತಿದ್ದಾರೆ.