ನಕಲಿ ವಿಡಿಯೊ ಮೂಲಕ ಬ್ಲಾಕ್‌ಮೇಲ್ : ಪಾಕಿಸ್ತಾನ ಆಟಗಾರ ಶಾರ್ಜೀಲ್ ಆರೋಪ

ಶುಕ್ರವಾರ, 13 ಮೇ 2016 (12:16 IST)
ಕೆಲವು ಅಜ್ಞಾತ ವ್ಯಕ್ತಿಗಳು ಹಣದ ಬೇಡಿಕೆ ಮಂಡಿಸುವ ಮೂಲಕ ತನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಪಾಕಿಸ್ತಾನದ ಓಪನರ್ ಶಾರ್ಜೀಲ್ ಖಾನ್ ಹೇಳಿದ್ದಾರೆ.  ಹಣ ನೀಡದಿದ್ದರೆ ಶಾರ್ಜೀಲ್ ವರ್ಚಸ್ಸಿಗೆ ಕಳಂಕ ಉಂಟುಮಾಡುವ ಕೆಲವು ವಿಡಿಯೊಗಳನ್ನು ಬಿಡುಗಡೆ ಮಾಡುವುದಾಗಿ  ಬೆದರಿಕೆ ಹಾಕಿದ್ದಾರೆಂದು ಶಾರ್ಜೀಲ್ ತಿಳಿಸಿದರು.
 
 ಶಾರ್ಜೀಲ್ ತವರುಪಟ್ಟಣ ಹೈದರಾಬಾದ್‌ನ ನಿವಾಸಕ್ಕೆ ಪೊಲೀಸರು ಭೇಟಿ ನೀಡಿದ್ದು ಶಾರ್ಜೀಲ್ ತಂದೆಯ ಜತೆ ಮಾತನಾಡಿದ್ದಾರೆ.  ಆದರೆ ಕುಟುಂಬ ಯಾವುದೇ ಅಧಿಕೃತ ದೂರನ್ನು ಸಲ್ಲಿಸಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
 ಎಡಗೈ ಆಟಗಾರ ಶಾರ್ಜೀಲ್ ಇತ್ತೀಚಿನ ಏಷ್ಯಾ ಕಪ್ ಮತ್ತು ವಿಶ್ವ ಟಿ 20ಯಲ್ಲಿ ಆಡಿದ್ದು, ತನ್ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ ವಿಡಿಯೊ ಸಂದೇಶದಲ್ಲಿ ಕೆಲವು ಜನರು ತನಗೆ ಬ್ಲಾಕ್‌ಮೇಲ್ ಮಾಡಲು ಯತ್ನಿಸುತ್ತಿದ್ದಾರೆಂದು ತನ್ನ ಅಭಿಮಾನಿಗಳಿಗೆ ತಿಳಿಸಲು ಬಯಸಿರುವುದಾಗಿ ಹೇಳಿದರು.

 ಕೆಲವು ಜನರು ನನಗೆ ಕರೆ ಮಾಡಿ 2 ಲಕ್ಷ ರೂ. ನೀಡದಿದ್ದರೆ ಕೆಲವು ವಿಡಿಯೊಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವಿಡಿಯೊಗಳನ್ನು ತಿದ್ದಲಾಗಿದ್ದು, ನಾನು ಯಾವುದೇ ರೀತಿಯಲ್ಲಿ ಅದರಲ್ಲಿ ಭಾಗಿಯಾಗಿಲ್ಲ ಎಂದು ನನ್ನ ಅಭಿಮಾನಿಗಳಿಗೆ ಹೇಳಲು ಇಚ್ಛಿಸುತ್ತೇನೆ ಎಂದು ಶಾರ್ಜೀಲ್ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ