ಪಾಕಿಸ್ತಾನ ತಂಡವು ಈ ತಿಂಗಳಾಂತ್ಯದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಉತ್ತಮ ಪ್ರದರ್ಶನ ನೀಡಲು ಪ್ರಯಾಸ ಪಡಬೇಕಾಗುತ್ತದೆ ಎಂದು ಪಾಕಿಸ್ತಾನದ ಮಾಜಿ ನಾಯಕ ಸಲೀಂ ಮಲಿಕ್ ಭಾವಿಸಿದ್ದಾರೆ. ಈ ಅವಧಿಯಲ್ಲಿ ಪಾಕಿಸ್ತಾನವು ನಾಲ್ಕು ಟೆಸ್ಟ್ ಪಂದ್ಯಗಳನ್ನು ಮತ್ತು ಐದು ಏಕ ದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. 103 ಟೆಸ್ಟ್ ಪಂದ್ಯಗಳು ಮತ್ತು 283 ಏಕದಿನ ಪಂದ್ಯಗಳೊಂದಿಗೆ ಪಾಕಿಸ್ತಾನದ ಟಾಪ್ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾದ ಮಲಿಕ್, ಇಂಗ್ಲೆಂಡ್‌ನಲ್ಲಿ ಪಾಕ್ ತಂಡ ಹೇಗೆ ಪ್ರದರ್ಶನ ನೀಡುತ್ತದೆ ಎನ್ನುವುದೇ ಚಿಂತೆಯಾಗಿರುವುದಾಗಿ ತಿಳಿಸಿದರು.
ಸಾಂಪ್ರದಾಯಿಕವಾಗಿ ಏಷ್ಯಾ ತಂಡಗಳು ಇಂಗ್ಲೀಷ್ ಸ್ಥಿತಿಗತಿಗಳಲ್ಲಿ ಮತ್ತು ಪಿಚ್‌ಗಳಲ್ಲಿ ಆಡುವುದಕ್ಕೆ ಪ್ರಯಾಸ ಪಡುತ್ತವೆ. ಪಾಕಿಸ್ತಾನದ ಸಮಸ್ಯೆಯೇನೆಂದರೆ ಕಳೆದ ಕೆಲವು ವರ್ಷಗಳಿಂದ ಯುಎಇನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾದ ಪಿಚ್‌ಗಳಲ್ಲಿ ಹೆಚ್ಚಾಗಿ ಆಡುತ್ತಿದ್ದು, ಅಲ್ಲಿ ಚೆಂಡು ಹೆಚ್ಚು ಸ್ವಿಂಗ್ ಅಥವಾ ಸ್ಪಿನ್ ಆಗುವುದಿಲ್ಲ ಎಂದು ಮಲಿಕ್ ಹೇಳಿದರು.
ಇಂಗ್ಲೆಂಡ್‌ನಲ್ಲಿ ತಂಡದ ಪ್ರದರ್ಶನಗಳ ಬಗ್ಗೆ ಕಾಳಜಿ ಹೊಂದಿರುವ ಟಾಪ್ ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳಲ್ಲಿ ಮಲಿಕ್ ಮಾತ್ರವಲ್ಲ. ಇಂಗ್ಲೀಷ್ ವೇಗದ ದಾಳಿಯನ್ನು ನಿಭಾಯಿಸಲು ಬ್ಯಾಟ್ಸ್‌ಮನ್‌ಗಳು ಬೇಗನೇ ಹೊಂದಿಕೊಳ್ಳುತ್ತಾರೆಂದು ಮುಹಮ್ಮದ್ ಯುಸುಫ್ ಕೂಡ ಆಶಿಸಿದ್ದಾರೆ. ಇಂಗ್ಲೆಂಡ್ ಪಾಕಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯಗಳಿಗೆ ಇಬ್ಬರು ಟಾಪ್ ಬೌಲರುಗಳನ್ನು ಫ್ರೆಶ್ ಆಗಿ ಇರಿಸಿರುವುದು ಪಾಕಿಸ್ತಾನಕ್ಕೆ ಅಗ್ನಿಪರೀಕ್ಷೆಯಾಗಿರುವುದನ್ನು ಸೂಚಿಸುತ್ತದೆ ಎಂದು ಮಲಿಕ್ ಹೇಳಿದರು.