ಮೊನ್ನೆ ಪ್ಲಾಪ್ ಶೋ ನೀಡಿದ್ದ ಪಾಕ್ ಕ್ರಿಕೆಟಿಗರು ಸೂಪರ್ ಮ್ಯಾನ್ ಗಳಾಗಿದ್ದು ಹೇಗೆ?!
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಕೂಟದಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿರುವ ಅತಿಥೇಯ ತಂಡ 14 ರನ್ ಗಳ ಸೋಲನುಭವಿಸಿತು. ಇಂಗ್ಲೆಂಡ್ ಪರ ಜೋ ರೂಟ್ (107) ಮತ್ತು ಜೋಸ್ ಬಟ್ಲರ್ (103) ಶತಕ ಗಳಿಸಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. ಇದರೊಂದಿಗೆ ಮೊದಲ ಪಂದ್ಯ ಹೀನಾಯವಾಗಿ ಸೋತಿದ್ದಕ್ಕೆ ಭಾರೀ ಟ್ರೋಲ್ ಗೊಳಗಾಗಿದ್ದ ಪಾಕ್ ಎರಡನೇ ಪಂದ್ಯದಲ್ಲಿ ಅದ್ಭುತ ಕಮ್ ಬ್ಯಾಕ್ ಮಾಡುವ ಮೂಲಕ ಎದುರಾಳಿಗಳಿಗೆ ಎಚ್ಚರಿಕೆಯ ಕರೆಗಂಟೆ ನೀಡಿದೆ.