ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಜೆರ್ಸಿ ಕಲರ್ ಬದಲಾವಣೆ

ಮಂಗಳವಾರ, 4 ಜೂನ್ 2019 (09:41 IST)
ಲಂಡನ್: ಈ ಬಾರಿ ವಿಶ್ವಕಪ್ ನಲ್ಲಿ ನಾಲ್ಕು ತಂಡಗಳು ಒಂದೇ ಬಣ್ಣದ ಅಂದರೆ ನೀಲಿ ಬಣ್ಣದ ಜೆರ್ಸಿ ಹೊಂದಿವೆ. ಈ ಕಾರಣಕ್ಕೆ ಪ್ರತೀ ತಂಡವೂ ಎದುರುಬದುರಾದಾಗ ಒಂದು ತಂಡವು ಬೇರೆ ಬ‍ಣ್ಣದ ಜೆರ್ಸಿಯಲ್ಲಿ ಆಡಲು ಐಸಿಸಿ ಸೂಚಿಸಿದೆ.


ಅದರಂತೆ ಇಂಗ್ಲೆಂಡ್ ಮತ್ತು ಭಾರತದ ಜೆರ್ಸಿ ಬಣ್ಣ ಒಂದೇ ಆಗಿದ್ದು, ಈ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಆಡಲಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಭಾರತೀಯ ಕ್ರಿಕೆಟಿಗರು ಬೇರೆ ಬಣ್ಣದ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಎಲ್ಲಾ ತಂಡಗಳೂ ಈ ಬಾರಿ ಒಂದು ಪಂದ್ಯಕ್ಕೆ ಬೇರೆ ಬಣ್ಣದ ಜೆರ್ಸಿಯಲ್ಲಿ ಆಡಲಿದೆ. ಆಟಗಾರರು ಮಾತ್ರವಲ್ಲ, ಅಂಪಾಯರ್ ಗಳ ಸಮವಸ್ತ್ರದ ಬಣ್ಣವೂ ಬದಲಾವಣೆಯಾಗಲಿದೆ. ಭಾರತದ ಹೊಸ ಸಮವಸ್ತ್ರ ಇನ್ನೂ ಪ್ರಕಟವಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ