ಈ ಬಾರಿ ವಿಶ್ವಕಪ್ ಗೆಲ್ಲುವ ತಂಡ ಪಾಕಿಸ್ತಾನ?!

ಗುರುವಾರ, 28 ಅಕ್ಟೋಬರ್ 2021 (09:05 IST)
ದುಬೈ: ಟಿ20 ವಿಶ್ವಕಪ್ ನ ಆರಂಭಿಕ ಎರಡೂ ಪಂದ್ಯಗಳಲ್ಲಿ ಭರ್ಜರಿ ಜಯಗಳಿಸಿರುವ ಪಾಕಿಸ್ತಾನ ತಂಡ ಈ ಬಾರಿಯ ಚಾಂಪಿಯನ್ ಆಗಬಹುದೇ?

ಈ ಬಗ್ಗೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಭವಿಷ್ಯ ನುಡಿದಿದ್ದು, ಈ ಬಾರಿಯ ಫೇವರಿಟ್ ತಂಡಗಳ ಪಟ್ಟಿಯಲ್ಲಿ ಪಾಕ್ ಮುಂಚೂಣಿಯಲ್ಲಿದೆ ಎಂದಿದ್ದಾರೆ.

ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕ್ ಭರ್ಜರಿ ಜಯ ಗಳಿಸಿದೆ. ಸ್ವತಃ ನಾಯಕ ಬಾಬರ್ ಅಜಮ್ ಅದ್ಭುತ ಫಾರ್ಮ್ ನಲ್ಲಿರುವುದು ಪಾಕ್ ತಂಡದ ಪ್ರಮುಖ ಶಕ್ತಿ. ಇದಲ್ಲದೆ, ಬೌಲರ್ ಗಳೂ ಮಿಂಚುತ್ತಿರುವುದು ಗಮನಾರ್ಹ. ಆದರೆ ಈ ಎರಡೂ ಪಂದ್ಯಗಳಲ್ಲೂ ಪಾಕ್ ಮೊದಲು ಫೀಲ್ಡಿಂಗ್ ನಡೆಸಿತ್ತು ಎನ್ನುವುದನ್ನು ಗಮನಸಿಬೇಕು. ಒಂದು ವೇಳೆ ಮೊದಲು ಬ್ಯಾಟಿಂಗ್ ಮಾಡಿಯೂ ಇದೇ ಮಟ್ಟದ ಪ್ರದರ್ಶನ ಕಂಡುಕೊಂಡರೆ ಪಾಕ್ ಫೈನಲ್ ಗೇರುವ ಎಲ್ಲಾ ಸಾಧ‍್ಯತೆಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ