ಭಾರತದ ಜತೆಗೆ ಕ್ರಿಕೆಟ್ ಆಡಲು ನಾವು ಯಾವತ್ತೂ ರೆಡಿ ಎಂದ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ

ಶುಕ್ರವಾರ, 24 ಜುಲೈ 2020 (11:55 IST)
ಇಸ್ಲಾಮಾಬಾದ್: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆಯದೇ ವರ್ಷಗಳೇ ಕಳೆದಿವೆ. ಆದರೆ ಆಗಾಗ ಪಾಕ್ ಮಾಜಿ ಕ್ರಿಕೆಟಿಗರು ಭಾರತದ ಜತೆ ಕ್ರಿಕೆಟ್ ಆಡುವ ಇಂಗಿತ ವ್ಯಕ್ತಪಡಿಸುತ್ತಲೇ ಇರುತ್ತಾರೆ.


ಇದೀಗ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಎಹ್ಸಾನ್ ಮಣಿ ಇದೇ ಮಾತನ್ನು ಹೇಳಿದ್ದಾರೆ. ಭಾರತದ ಜತೆ ಸರಣಿ ಆಡುವುದಕ್ಕೆ ನಮ್ಮ ತಕಾರಾರಿಲ್ಲ. ಆದರೆ ಹಾಗಂತ ಕ್ರಿಕೆಟ್ ಸರಣಿ ಆಡೋಣ ಎಂದು ಭಾರತಕ್ಕೆ ದಂಬಾಲು ಬೀಳಲ್ಲ ಎಂದಿದ್ದಾರೆ.

2013 ರ ಬಳಿಕ ಉಭಯ ದೇಶಗಳ ನಡುವೆ ಕ್ರಿಕೆಟ್ ಸರಣಿಯೇ ನಡೆದಿಲ್ಲ. ಒಂದು ವೇಳೆ ಭಾರತ ಆಡಲು ಸಿದ್ಧ ಎಂದರೆ ನಾವೂ ಸಿದ್ಧ. ನಮಗೆ ಅವರ ಜತೆ ಆಡುವುದಕ್ಕೆ ತಕಾರಾರಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ