ರೋಹಿತ್ ಶರ್ಮಾಗೆ ಹೀಗೊಂದು ವಿಶೇಷ ಪ್ರಶ್ನೆ ಹಾಕಿದ ಪ್ರಧಾನಿ ನರೇಂದ್ರ ಮೋದಿ

Krishnaveni K

ಗುರುವಾರ, 4 ಜುಲೈ 2024 (15:59 IST)
Photo Credit: X
ನವದೆಹಲಿ: ಟಿ20 ವಿಶ್ವಕಪ್ ಚಾಂಪಿಯನ್ ಆದ ಟೀಂ ಇಂಡಿಯಾವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ನಿವಾಸಕ್ಕೆ ಕರೆದು ಸನ್ಮಾನ ಮಾಡಿದ್ದಾರೆ. ಈ ವೇಳೆ ನಾಯಕ ರೋಹಿತ್ ಶರ್ಮಾಗೆ ಮೋದಿ ಒಂದು ವಿಶಿಷ್ಟ ಪ್ರಶ್ನೆ ಹಾಕಿದ್ದಾರೆ.

ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಇಡೀ ಭಾರತ ತಂಡವೇ ಇಂದು ಪ್ರಧಾನಿ ನಿವಾಸಕ್ಕೆ ಆಗಮಿಸಿದೆ. ಈ ವೇಳೆ ನರೇಂದ್ರ ಮೋದಿ ಎಲ್ಲರನ್ನೂ ಖುದ್ದಾಗಿ ಸ್ವಾಗತಿಸಿ ಬಳಿಕ ಫೋಟೋ ಸೆಷನ್ ನಡೆಸಿದೆ. ಅಲ್ಲದೆ ಇಡೀ ಭಾರತ ತಂಡದ ಕ್ರಿಕೆಟಿಗರನ್ನು ಮೋದಿ ಪ್ರತ್ಯೇಕವಾಗಿ ಮಾತನಾಡಿಸಿದ್ದಾರೆ.

ಆ ಪೈಕಿ ನಾಯಕ ರೋಹಿತ್ ಶರ್ಮಾಗೆ ಪ್ರಧಾನಿ ಮೋದಿ ವಿಶೇಷ ಪ್ರಶ್ನೆ ಹಾಕಿದ್ದಾರೆ. ಟಿ20 ವಿಶ್ವಕಪ್ ಗೆದ್ದ ಬಳಿಕ ಪಿಚ್ ಬಳಿ ಸಾಗಿದ್ದ ರೋಹಿತ್ ಶರ್ಮಾ ಮಣ್ಣು ಮತ್ತು ಹುಲ್ಲನ್ನು ಸೇವಿಸಿದ್ದರು. ಇದೇ ವಿಚಾರವಾಗಿ ಮೋದಿ ಪ್ರಶ್ನೆ ಮಾಡಿದ್ದಾರೆ. ಮಣ್ಣಿನ ಟೇಸ್ಟ್ ಹೇಗಿತ್ತು ಎಂದು ರೋಹಿತ್ ಗೆ ಮೋದಿ ಪ್ರಶ್ನಿಸಿದ್ದಾರೆ.

ಎಲ್ಲಾ ಕ್ರಿಕೆಟಿಗರಿಗೂ ಮೋದಿ ಒಂದೊಂದು ಪ್ರಶ್ನೆ ಹಾಕಿದ್ದು, ಅಕ್ಸರ್ ಪಟೇಲ್ ಬಳಿ ಸಂಕಷ್ಟದ ಪರಿಸ್ಥಿತಿಯಲ್ಲಿ ನಿಮ್ಮನ್ನು ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಸಿದಾಗ ಏನು ಅನಿಸಿತು ಎಂದು ಪ್ರಶ್ನೆ ಮಾಡಿದ್ದಾರೆ.  ವಿಶೇಷವಾಗಿ ವೇಗದ ಬೌಲಿಂಗ್ ಪಡೆಯನ್ನು ಶ್ಲಾಘಿಸಿದ ಮೋದಿ ಕೊನೆಯ ಓವರ್ ನ ಪ್ಲ್ಯಾನಿಂಗ್ ಏನಿತ್ತು ಎಂದು ಹಾರ್ದಿಕ್ ಗೆ ಪ್ರಶ್ನೆ ಮಾಡಿದ್ದಾರೆ. ಇನ್ನು ಕ್ಯಾಚ್ ಹಿಡಿದು ಮ್ಯಾಚ್ ಗೆಲ್ಲಿಸಿದ ಸೂರ್ಯಕುಮಾರ್ ಯಾದವ್ ಗೆ ಆ ಕ್ಷಣವನ್ನು ಮತ್ತೊಮ್ಮೆ ಮೆಲುಕು ಹಾಕುವಂತೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ