ನಾಳೆ ಭಾರತ- ಪಾಕ್‌ ಹೈವೋಲ್ಟೇಜ್​ ಕದನ: ಮತ್ತೆ ಗಾಯಾಳಾದ ರೋಹಿತ್‌ ಶರ್ಮಾ

Sampriya

ಶನಿವಾರ, 8 ಜೂನ್ 2024 (13:23 IST)
Photo Courtesy X
ನ್ಯೂಯಾರ್ಕ್​: ಇಲ್ಲಿನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ನಾಳೆ ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್​ ಕದನವನ್ನು ವೀಕ್ಷಿಸಲು ಕ್ರೀಡಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದಾಗಿದೆ. ಐರ್ಲೆಂಡ್ ವಿರುದ್ಧ ಸುಲಭ ಗೆಲುವು ಸಾಧಿಸಿರುವ ಭಾರತ ತಂಡವು ಈ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸಲು ಎದುರು ನೋಡಿತ್ತಿದೆ. ಆದರೆ, ಈ ಪಂದ್ಯಕ್ಕೆ ನಾಯಕ ರೋಹಿತ್‌ ಶರ್ಮಾ ಕಣಕ್ಕೆ ಇಳಿಯುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಐರ್ಲೆಂಡ್​  ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ ಮಾಡುವ ವೇಳೆ ರೋಹಿತ್​ ಶರ್ಮಾ ಭುಜಕ್ಕೆ ಚೆಂಡು ತಗುಲಿ ಗಾಯಗೊಂಡಿದ್ದರು. ರಿಟೈರ್ಡ್​ ಹರ್ಟ್​ ಆಗಿ ಮೈದಾನದಿಂದ ಹೊರ ನಡೆದಿದ್ದ ರೋಹಿತ್​ ಬಳಿಕ ಚೇತರಿಸಿಕೊಂಡಿದ್ದರು. ಆದರೆ, ನೆಟ್ಸ್​ನಲ್ಲಿ ಅಭ್ಯಾಸ ನಡೆಸುತ್ತಿದ್ದ ರೋಹಿತ್​ ಶರ್ಮಾ ಈಗ ಮತ್ತೊಮ್ಮೆ ಗಾಯಕ್ಕೆ ತುತ್ತಾಗಿದ್ದಾರೆ ಎನ್ನಲಾಗಿದೆ.

ಅಭ್ಯಾಸ ನಡೆಸುವ ವೇಳೆ ರೋಹಿತ್​ ಶರ್ಮಾ ಹೆಬ್ಬರಳಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕೂಡಲೇ ಅಭ್ಯಾಸ ನಿಲ್ಲಿಸಿದ ರೋಹಿತ್​ ಶರ್ಮಾ ಅಭ್ಯಾಸ ನಿಲ್ಲಿಸಿ ತ್ವರಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಲು ತೆರಳಿದ್ದಾರೆ. ಈ ಗಾಯದ ಸುದ್ದಿ ಬೆನ್ನಲ್ಲೇ ರೋಹಿತ್ ಶರ್ಮಾ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಲಭ್ಯವಾಗುವೇ ಎಂಬುದು ಖಚಿತವಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ