ಸೆಕ್ಸಿ ಶಬ್ಧ ಬಳಸಲು ಹಿಂದೇಟು ಹಾಕಿದ ದ್ರಾವಿಡ್: ಸುದ್ದಿಗೋಷ್ಠಿಯಲ್ಲಿ ನಗೆಯೋ ನಗೆ
ಪಾಕಿಸ್ತಾನ ಬೌಲಿಂಗ್ ಯೂನಿಟ್ ನ್ನು ಸೆಕ್ಸಿ ಎನ್ನಬೇಕಿದ್ದ ದ್ರಾವಿಡ್ ನಾನು ಇಲ್ಲಿ ಆ ಪದ ಬಳಸದೇ ಇರುವುದೇ ಉತ್ತಮ. ಅದು ಎಸ್ ಲೆಟರ್ ನಿಂದ ಆರಂಭವಾಗುವ ನಾಲ್ಕು ಅಕ್ಷರದ ಪದ ಎಂದಾಗ ಅಲ್ಲಿದ್ದವರು ನಗೆಗಡಲಲ್ಲಿ ತೇಲಿದರು.
ಬಳಿಕ ದ್ರಾವಿಡ್ ಗೆ ಕೆಲವು ಪತ್ರಕರ್ತರು ಅದಕ್ಕೆ ಪರ್ಯಾಯವಾಗಿ ಯಾವ ಪದ ಬಳಸಬಹುದು ಎಂದು ಸಲಹೆಯನ್ನೂ ನೀಡಿದರು. ದ್ರಾವಿಡ್ ಕೊನೆಗೂ ಆ ಪದ ಬಳಸಲೇ ಇಲ್ಲ.