ಕೊಹ್ಲಿ-ಗಂಗೂಲಿ ವಿವಾದದ ಬಗ್ಗೆ ಮಾತಾಡಕ್ಕೆ ಇದು ಸಮಯವಲ್ಲ: ದ್ರಾವಿಡ್ ಖಡಕ್ ಮಾತು
ನಿನ್ನೆ ಮಾಧ್ಯಮಗೋಷ್ಠಿಯಲ್ಲಿ ಕೊಹ್ಲಿ-ಗಂಗೂಲಿ ನಡುವಿನ ವಿವಾದದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ದ್ರಾವಿಡ್ ಗೆ ಪ್ರಶ್ನೆ ಕೇಳಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ದ್ರಾವಿಡ್, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ವಿಚಾರ ಚರ್ಚಿಸಲು ಇದು ವೇದಿಕೆಯೂ ಅಲ್ಲ, ಸಮಯವೂ ಅಲ್ಲ. ಆಂತರಿಕವಾಗಿ ನಡೆದ ಚರ್ಚೆಗಳನ್ನು ನಾನು ಮಾಧ್ಯಮಗಳ ಮುಂದೆ ಬಹಿರಂಗಗೊಳಿಸಲ್ಲ. ವೈಟ್ ಬಾಲ್ ಗೆ ಯಾರು ನಾಯಕನಾಗಬೇಕು ಎಂಬುದು ಸಂಪೂರ್ಣವಾಗಿ ಆಯ್ಕೆಗಾರರಿಗೆ ಬಿಟ್ಟ ವಿಷಯ ಎಂದು ದ್ರಾವಿಡ್ ಖಡಕ್ ಆಗಿ ಹೇಳಿದ್ದಾರೆ.