ತಂಡದಲ್ಲಿ ರಿಷಬ್ ಪಂತ್ ಸ್ಥಾನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಕೋಚ್ ದ್ರಾವಿಡ್

ಸೋಮವಾರ, 20 ಜೂನ್ 2022 (10:10 IST)
ಬೆಂಗಳೂರು: ದ.ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸಿದ್ದ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ವೈಯಕ್ತಿಕವಾಗಿ ಫಾರ್ಮ್ ಕೊರತೆ ಅನುಭವಿಸಿದ್ದರು. ಇದರಿಂದಾಗಿ ರಿಷಬ್ ರನ್ನು ಮುಂದೆ ತಂಡದಿಂದ ಕಿತ್ತು ಹಾಕಬೇಕು ಎಂಬ ಕೂಗೂ ಕೇಳಿಬಂದಿತ್ತು.

ಇತ್ತೀಚೆಗೆ ದಿನೇಶ್ ಕಾರ್ತಿಕ್ ಕ್ಲಿಕ್ ಆಗುತ್ತಿರುವುದರಿಂದ ಸೀನಿಯರ್ಸ್ ತಂಡಕ್ಕೆ ಬಂದ ಮೇಲೆ ರಿಷಬ್ ಬದಲಿಗೆ ದಿನೇಶ್ ಕಾರ್ತಿಕ್ ರನ್ನೇ ವಿಕೆಟ್ ಕೀಪರ್ ಆಗಿಯೂ ಬಳಸಿಕೊಳ್ಳಬೇಕು ಎಂಬ ಮಾತು ಕೇಳಿಬರುತ್ತಿತ್ತು. ಈ ಬಗ್ಗೆ ನಿನ್ನೆಯ ಪಂದ್ಯದ ಬಳಿಕ ಕೋಚ್ ರಾಹುಲ್ ದ್ರಾವಿಡ್ ಮಹತ್ವದ ಹೇಳಿಕೆ ನೀಡಿದ್ದಾರೆ.

‘ರಿಷಬ್ ಪಂತ್ ಐಪಿಎಲ್ ನಲ್ಲಿ ಉತ್ತಮ ಆಟವಾಡಿದ್ದರು. ಅವರು ತಮ್ಮ ಶೈಲಿಯಲ್ಲಿ ಬ್ಯಾಟು ಬೀಸಲಿ ಎಂಬುದೇ ನಮ್ಮೆಲ್ಲರ ಬಯಕೆ. ಐಪಿಎಲ್ ನ ಫಾರ್ಮ್ ನ್ನು ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಮುಂದುವರಿಸುತ್ತಾರೆ ಎಂಬ ನಂಬಿಕೆಯಿದೆ. ಮೂರು-ನಾಲ್ಕು ಪಂದ್ಯಗಳಲ್ಲಿ ಅವರು ವಿಫಲರಾಗಿರಬಹುದು. ಹಾಗಂತ ಅವರನ್ನು ಕಡೆಗಣಿಸಲಾಗದು. ರಿಷಬ್ ಈಗಲೂ ನಮ್ಮ ತಂಡದ ಭಾಗವಾಗಿಯೇ ಇದ್ದಾರೆ’ ಎಂದು ದ್ರಾವಿಡ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ