ಟೀಂ ಇಂಡಿಯಾದಲ್ಲಿ ಹಳೆಯ ಪದ್ಧತಿಯನ್ನು ಮರಳಿ ತಂದ ರಾಹುಲ್ ದ್ರಾವಿಡ್

ಶುಕ್ರವಾರ, 26 ನವೆಂಬರ್ 2021 (09:27 IST)
ಕಾನ್ಪುರ: ಟೀಂ ಇಂಡಿಯಾ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ರಾಹುಲ್ ದ್ರಾವಿಡ್ ಬಹಳಷ್ಟು ಬದಲಾವಣೆ ತರಲು ಪ್ರಯತ್ನಿಸುತ್ತಿದ್ದಾರೆ.

ಇದೀಗ ಹಳೆಯ ಸಂಪ್ರದಾಯವೊಂದನ್ನು ಮರಳಿ ಆರಂಭಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಪಾದಾರ್ಪಣೆ ಪಂದ್ಯವಾಡುವ ಕ್ರಿಕೆಟಿಗರಿಗೆ ಗೌರವ ಪೂರ್ವಕವಾಗಿ ಕ್ಯಾಪ್‍ ನ್ನು ಮಾಜಿ ಕ್ರಿಕೆಟಿಗರಿಂದ ಕೊಡಿಸಲಾಗುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ  ಈ ಸಂಪ್ರದಾಯ ಮರೆಯಾಗಿತ್ತು.

ಆದರೆ ಕೋಚ್ ದ್ರಾವಿಡ್ ಈಗ ಮತ್ತೆ ಅದನ್ನು ಮರಳಿ ತಂದಿದ್ದಾರೆ. ನಿನ್ನೆ ಶ್ರೇಯಸ್ ಐಯರ್ ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೈಯಲ್ಲಿ ಕ್ಯಾಪ್ ಕೊಡಿಸಲಾಗಿತ್ತು. ಅದಕ್ಕೂ ಮೊದಲು ಟಿ20 ಸರಣಿಯಲ್ಲಿ ಹರ್ಷಲ್ ಪಟೇಲ್ ಗೆ ಅಜಿತ್ ಅಗರ್ಕರ್ ಕೈಯಲ್ಲಿ ಕ್ಯಾಪ್ ಕೊಡಿಸಲಾಗಿತ್ತು. ಹೀಗೆ ಮಾಜಿ ಕ್ರಿಕೆಟಿಗರನ್ನು ಆಹ್ವಾನಿಸಿ ಅವರಿಂದ ಯುವ ಆಟಗಾರರಿಗೆ ಕ್ಯಾಪ್ ಕೊಡಿಸುವ ಸಂಪ್ರದಾಯವನ್ನು ದ್ರಾವಿಡ್ ಮರಳಿ ತಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ