ಭಾರತ-ನ್ಯೂಜಿಲೆಂಡ್ ಟೆಸ್ಟ್: ಪೂಜಾರ-ಗಿಲ್ ಎಚ್ಚರಿಕೆಯ ಆಟ
ಇದೀಗ ಚೇತೇಶ್ವರ ಪೂಜಾರ 5, ಶುಬ್ನಂ ಗಿಲ್ 23 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಮಯಾಂಕ್ ಅಗರ್ವಾಲ್ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.
ಇದಾದ ಬಳಿಕ ಗಿಲ್-ಪೂಜಾರ ಜೋಡಿ ಎಚ್ಚರಿಕೆಯಿಂದ ಇನಿಂಗ್ಸ್ ಕಟ್ಟುವ ಕೆಲಸಕ್ಕೆ ಮುಂದಾಗಿದೆ. ಮೊದಲ ಅವಧಿಯಲ್ಲಿ ಕಿವೀಸ್ ಮೇಲುಗೈ ಸಾಧಿಸಿದರೂ ಬಳಿಕ ಹೆಚ್ಚಿನ ಅಪಾಯವಾಗದಂತೆ ಈ ಜೋಡಿ ನೋಡಿಕೊಂಡಿದೆ.