ಕಾನ್ಪುರ ಟೆಸ್ಟ್: ಟೀಂ ಇಂಡಿಯಾಗೆ ಶ್ರೇಯಸ್-ಜಡೇಜಾ ಭರ್ಜರಿ ಕೊಡುಗೆ
ಮಯಾಂಕ್ ಅಗರ್ವಾಲ್ 13 ರನ್ ಗಳಿಸಿ ಔಟಾದಾಗ ಜೊತೆಯಾದ ಚೇತೇಶ್ವರ ಪೂಜಾರ-ಶುಬ್ನಂ ಗಿಲ್ ಭದ್ರ ಬುನಾದಿ ಹಾಕಿಕೊಟ್ಟರು. ಈ ಪೈಕಿ ಪೂಜಾರ 26 ಮತ್ತು ಶುಬ್ನಂ ಗಿಲ್ ಸೊಗಸಾದ 52 ರನ್ ಗಳ ಕೊಡುಗೆ ನೀಡಿದರು. ಬಳಿಕ ನಾಯಕ ರೆಹಾನೆ ಇನಿಂಗ್ಸ್ 35 ರನ್ ಗೆ ಕೊನೆಗೊಂಡಿತು.
ಚಹಾ ವಿರಾಮ ವೇಳೆಗೆ 4 ವಿಕೆಟ್ ಕಳೆದುಕೊಂಡು 145 ರನ್ ಗಳಿಸಿ ಟೀಂ ಇಂಡಿಯಾ ಸಂಕಷ್ಟದಲ್ಲಿತ್ತು. ಆದರೆ ಬಳಿಕ ಕೊನೆಯ ಅವಧಿಯಲ್ಲಿ ಶ್ರೇಯಸ್ ಐಯರ್, ರವೀಂದ್ರ ಜಡೇಜಾ ಜೋಡಿ ಭಾರತವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದರು. ಇದೀಗ ಶ್ರೇಯಸ್ ಅಜೇಯ 75 ಮತ್ತು ಜಡೇಜಾ ಅಜೇಯ 50 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇಂದು ಮಂದ ಬೆಳಕಿನಿಂದಾಗಿ ಆಟ ಕೊಂಚ ಬೇಗನೇ ಮುಕ್ತಾಯಗೊಳಿಸಲಾಯಿತು.