ಟೀಂ ಇಂಡಿಯಾಗೆ ಅನುಕೂಲವಿಲ್ಲದ ಪಿಚ್: ಕ್ಯುರೇಟರ್ ವಿರುದ್ಧ ದ್ರಾವಿಡ್ ಅಸಮಾಧಾನ?

ಶುಕ್ರವಾರ, 3 ಮಾರ್ಚ್ 2023 (08:30 IST)
ಇಂಧೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿದೆ.

ಭಾರತಕ್ಕೆ ಉಪಯೋಗವಾಗುವಂತೆ ಸ್ಪಿನ್ ಸ್ನೇಹಿ ಪಿಚ್ ತಯಾರಿಸಲು ಸೂಚನೆ ನೀಡಲಾಗಿತ್ತು. ಅದಕ್ಕೆ ತಕ್ಕಂತೆ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆದರೆ ಬಳಿಕ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿತ್ತು.

ಮೊದಲ ಅವಧಿಯಲ್ಲಿ ಸ್ಪಿನ್ನರ್ ಗಳಿಗೆ ಭಾರೀ ಅನುಕೂಲ ಮಾಡಿಕೊಟ್ಟ ಪಿಚ್ ನಿಂದಾಗಿ ಭಾರತೀಯ ಬ್ಯಾಟಿಗರು ಸಂಕಷ್ಟ ಅನುಭವಿಸಿದರು. ಬಳಿಕ ಆಸ್ಟ್ರೇಲಿಯಾಗೆ ಬ್ಯಾಟಿಂಗ್ ಗೆ ಅನುಕೂಲವಾಯಿತು. ಇದರಿಂದ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅಸಮಾಧಾಗೊಂಡಿದ್ದಾರೆ. ಮೊದಲ ದಿನ ಪಂದ್ಯದ ನಡುವೆಯೇ ದ್ರಾವಿಡ್ ಮೈದಾನಕ್ಕೆ ಕ್ಯುರೇಟರ್ ಜೊತೆಗೇ ಬಂದು ಪಿಚ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅವರು ಅಸಮಾಧಾನಗೊಂಡಿದ್ದು ಸ್ಪಷ್ಟವಾಯಿತು. ಎರಡನೇ ದಿನವೂ ಪೆವಿಲಿಯನ್ ನಲ್ಲಿ ಕೂತಿದ್ದ ದ್ರಾವಿಡ್ ಮುಖದಲ್ಲಿ ಅಸಮಾಧಾನ ಸ್ಪಷ್ಟವಾಗಿ ಗೋಚರಿಸಿತ್ತು. ಹೀಗಾಗಿ ಮುಂದಿನ ಪಂದ್ಯಕ್ಕೆ ಟೀಂ ಇಂಡಿಯಾ ಗ್ರೀನ್ ಪಿಚ್ ಗೆ ಬೇಡಿಕೆಯಿಡುವ ಸಾಧ‍್ಯತೆಯಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ