ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ! ಆರ್ ಸಿಬಿಗೆ ಬಂದ ಕ್ವೀನ್ ಸ್ಮೃತಿ ಮಂಧನಾ

ಗುರುವಾರ, 2 ಮಾರ್ಚ್ 2023 (11:21 IST)
Photo Courtesy: Twitter
ಮುಂಬೈ: ಮಹಿಳಾ ಐಪಿಎಲ್ ಗೆ ಕ್ಷಣಗಣನೆ ಆರಂಭವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕ್ವೀನ್ ಸ್ಮೃತಿ ಮಂಧನಾ ಆಗಮನವಾಗಿದೆ.

ಸ್ಮೃತಿ ಮಂಧನಾ ಎಲ್ಲಿ ಎಂದು ಇಷ್ಟು ದಿನ ಅಭಿಮಾನಿಗಳು ಪ್ರಶ್ನಿಸುತ್ತಲೇ ಇದ್ದರು. ಈಗಾಗಲೇ ಆರ್ ಸಿಬಿ ತಂಡ ಮುಂಬೈಗೆ ಬಂದಿಳಿದಿತ್ತು. ಆದರೆ ಸ್ಮೃತಿ ಇನ್ನೂ ಬಂದಿರಲಿಲ್ಲ.

ಈಗ ಕೊನೆಗೂ ನಾಯಕಿಯ ಆಗಮನವಾಗಿದೆ. ಸ್ಮೃತಿ ತಂಡ ಕೂಡಿಕೊಂಡ ವಿಶೇಷ ವಿಡಿಯೋವನ್ನು ಆರ್ ಸಿಬಿ ಹಂಚಿಕೊಂಡಿದೆ. ಮಾರ್ಚ್ 5 ರಂದು ಆರ್ ಸಿಬಿ ಮೊದಲ ಪಂದ್ಯವಾಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ