ಭಾರತ-ಪಾಕ್ ಪಂದ್ಯ ವೀಕ್ಷಿಸಿದ ನಟಿ ರಮ್ಯಾ: ಜೊತೆಗಿದ್ದವರು ಯಾರು ಎಂಬುದೇ ನೆಟ್ಟಿಗರ ಕುತೂಹಲ

ಭಾನುವಾರ, 15 ಅಕ್ಟೋಬರ್ 2023 (09:20 IST)
Photo Courtesy: Twitter
ಅಹಮ್ಮದಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವಿನ ಏಕದಿನ ವಿಶ್ವಕಪ್ ಪಂದ್ಯವನ್ನು ವೀಕ್ಷಿಸಲು ನಿನ್ನೆ ಅಹಮ್ಮದಾಬಾದ್ ಸ್ಟೇಡಿಯಂನಲ್ಲಿ ಅನೇಕ ಗಣ್ಯರು ಸೇರಿದ್ದರು. ಅವರಲ್ಲಿ ನಟಿ ರಮ್ಯಾ ಕೂಡಾ ಒಬ್ಬರು.

ಕ್ರಿಕೆಟ್ ಇಷ್ಟಪಡುವ ರಮ್ಯಾ ಕೂಡಾ ನಿನ್ನೆ ಮೈದಾನದಲ್ಲಿ ಉಪಸ್ಥಿತರಿದ್ದು ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಪ್ರತ್ಯಕ್ಷ ಸಾಕ್ಷಿಯಾದರು. ಬ್ಲೂ ಡ್ರೆಸ್ ಹಾಕಿಕೊಂಡು ಭಾರತ ತಂಡಕ್ಕೆ ರಮ್ಯಾ ಸಪೋರ್ಟ್ ಮಾಡಿದ್ದರು.

ಆದರೆ ರಮ್ಯಾ ಜೊತೆಗಿದ್ದ ಹುಡುಗ ಯಾರು ಎಂಬುದೇ ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿತ್ತು. ರಮ್ಯಾ ಜೊತೆಗೆ ಗೆಳೆಯ ಸಂದೀಪ್ ಕೂಡಾ ಪಂದ್ಯ ವೀಕ್ಷಿಸಿದ್ದರು. ಇವರಿಬ್ಬರ ಫೋಟೋ ನೋಡಿ ನೆಟ್ಟಿಗರು ಇವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು, ರಮ್ಯಾ ನಿನ್ನೆಯ ಪಂದ್ಯದ ಬಳಿಕ ಮೈದಾನದ ಪರಿಸರದಲ್ಲಿ ಕಸ ಎಲ್ಲೆಂದರಲ್ಲಿ ಬಿಸಾಕಿರುವ ವಿಡಿಯೋ ಪ್ರಕಟಿಸಿ ಸ್ವಚ್ಛತೆ ಎಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ