ರಣಜಿ ಟ್ರೋಫಿ ಕ್ರಿಕೆಟ್: ಅದ್ಭುತ ಬೌಲಿಂಗ್ ನಂತರ ಬ್ಯಾಟಿಂಗ್ ನಲ್ಲೂ ಮರೆಯುತ್ತಿರುವ ಕರ್ನಾಟಕ

ಗುರುವಾರ, 7 ಡಿಸೆಂಬರ್ 2017 (17:01 IST)
ನಾಗ್ಪುರ: ಮುಂಬೈ ವಿರುದ್ಧ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಬೌಲಿಂಗ್ ನಂತರ ಬ್ಯಾಟಿಂಗ್ ನಲ್ಲೂ ಅಬ್ಬರ ಮುಂದುವರಿಸಿದ್ದಾರೆ.
 

ಮೊದಲ ಇನಿಂಗ್ಸ್ ನಲ್ಲಿ ಮುಂಬೈ ತಂಡವನ್ನು 173 ರನ್ ಗಳಿಗೆ ಕಟ್ಟಿ ಹಾಕಿದ ಕರ್ನಾಟಕ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿ ಆಟವಾಡುತ್ತಿತ್ತು. ಮುಂಬೈ ಮೊದಲ ಇನಿಂಗ್ಸ್ ನಲ್ಲಿ 100 ರನ್ ಗೆ ಆಲೌಟ್ ಆಗುವ ಭೀತಿಗೆ ಸಿಲುಕಿತ್ತು. ಆದರೆ ಧವಳ್ ಕುಲಕರ್ಣಿ ಅರ್ಧಶತಕ (75) ರನ್ ಬಾರಿಸಿ ತಂಡವನ್ನು ಆಧರಿಸಿದರು.

ಕರ್ನಾಟಕ ಪರ ನಾಯಕನ ಆಟವಾಡಿದ ವಿನಯ್ ಕುಮಾರ್ 6 ವಿಕೆಟ್ ಕಬಳಿಸಿದರು. ಎಸ್ ಅರವಿಂದ್ 2 ವಿಕೆಟ್ ಪಡೆದರು. ಇದೀಗ ಮೊದಲ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ಪರ ಆರಂಭಿಕ ರವಿಕಾಂತ್ ಸಮರ್ಥ್ 40 ರನ್ ಗಳಿಸಿ ಔಟಾಗಿದ್ದಾರೆ. ಇದೀಗ ಮಯಾಂಕ್ ಅಗರ್ವಾಲ್ 62 ರನ್ ಮತ್ತು ಎಂಕೆ ಅಬ್ಬಾಸ್ 12 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಮೊದಲ ಇನಿಂಗ್ಸ್ ಮೊತ್ತ ದಾಟಲು ಕರ್ನಾಟಕಕ್ಕೆ 58 ರನ್ ಬೇಕಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ