ರಣಜಿ ಟ್ರೋಫಿ ಕ್ರಿಕೆಟ್: ಮೊದಲ ಗೆಲುವಿನ ಸನಿಹ ಕರ್ನಾಟಕ
ನಾಳೆ ಒಂದು ದಿನದ ಪಂದ್ಯ ಬಾಕಿಯಿದ್ದು, ಕರ್ನಾಟಕದ ಗೆಲುವು ಬಹುತೇಕ ನಿಶ್ಚಿತವಾಗಿದೆ. ಇದಕ್ಕೂ ಮೊದಲು ಮಹಾರಾಷ್ಟ್ರ ದ್ವಿತೀಯ ಇನಿಂಗ್ಸ್ ನಲ್ಲಿ ಋತುರಾಜ್ ಗಾಯಕ್ ವಾಡ್ ರ 89 ರನ್ ಗಳ ನೆರವಿನಿಂದ 256 ರನ್ ಗಳಿಸಿತ್ತು. ಕರ್ನಾಟಕ ಪರ ಶ್ರೇಯಸ್ ಗೋಪಾಲ್ 4 ವಿಕೆಟ್ ಮತ್ತು ನಾಯಕ ವಿನಯ್ ಕುಮಾರ್ 3 ವಿಕೆಟ್ ಕಬಳಿಸಿದರು.