ಐಪಿಎಲ್ ಆರಂಭೋತ್ಸವದಲ್ಲಿ ಡ್ಯಾನ್ಸ್ ಮಾಡಲಿರುವ ರಶ್ಮಿಕಾ, ತಮನ್ನಾ

ಮಂಗಳವಾರ, 28 ಮಾರ್ಚ್ 2023 (09:10 IST)
Photo Courtesy: Twitter
ಅಹಮ್ಮದಾಬಾದ್: ಐಪಿಎಲ್ 2023 ಇದೇ ಶುಕ್ರವಾರದಿಂದ ಆರಂಭವಾಗಲಿದ್ದು, ಗುಜರಾತ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅದ್ಧೂರಿ ಆರಂಭೋತ್ಸವ ನಡೆಯಲಿದೆ.

ಕಳೆದ ಎರಡು ವರ್ಷಗಳಿಂದ ಕೊರೋನಾದಿಂದಾಗಿ ಅದ್ಧೂರಿ ಆರಂಭೋತ್ಸವಕ್ಕೆ ತಡೆಯಾಗಿತ್ತು. ಆದರೆ ಈ ಬಾರಿ ಐಪಿಎಲ್ ಎಂದಿನಂತೆ ಕಳೆಗಟ್ಟಲಿದೆ.

ಆರಂಭೋತ್ಸವದಲ್ಲಿ ಸೌತ್ ಸೆನ್ಸೇಷನಲ್ ನಟಿಯರಾದ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ ಹೆಜ್ಜೆ ಹಾಕಲಿದ್ದಾರೆ. ರಶ್ಮಿಕಾ ಪುಷ್ಪ ಸಿನಿಮಾದ ಸಾಮಿ ಸಾಮಿ ಸೇರಿದಂತೆ ತಮ್ಮ ಸಿನಿಮಾದ ಹಿಟ್ ಹಾಡುಗಳಿಗೆ ನೃತ್ಯ ಮಾಡಲಿದ್ದಾರಂತೆ. ಅಂತೂ ಆರಂಭೋತ್ಸವದಲ್ಲಿ ಈ ಇಬ್ಬರು ಸೌತ್ ಸುಂದರಿಯರ ಡ್ಯಾನ್ಸ್ ಕಣ್ತುಂಬಿಕೊಳ್ಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ