ರವಿಶಾಸ್ತ್ರಿಯನ್ನೇ ಆಯ್ಕೆ ಮಾಡುವುದಾದರೆ ಇಷ್ಟೆಲ್ಲಾ ನಾಟಕ ಬೇಕಿತ್ತಾ?!
ಕೆಲವರು ರವಿಶಾಸ್ತ್ರಿ ಕಾಮೆಂಟರಿ ಅದ್ಭುತ, ಆದರೆ ಕೋಚ್ ಆಗಿ ಅಲ್ಲ ಎಂದರೆ ಮತ್ತೆ ಕೆಲವರು ಆಯ್ತು ಬಿಡಿ, ಇನ್ನು ಟಿ20 ವಿಶ್ವಕಪ್ ನಲ್ಲೇ ಸೋಲೇ ಗ್ಯಾರಂಟಿ ಎಂದಿದ್ದಾರೆ. ಮತ್ತೆ ಕೆಲವರು ನಿಜವಾಗಿಯೂ ಈಗೀಗ ಈ ರೀತಿಯ ರಾಜಕೀಯ ನೋಡಿ ಕ್ರಿಕೆಟ್ ನೋಡುವುದನ್ನೇ ಬಿಟ್ಟಿದ್ದೇವೆ ಎಂದಿದ್ದಾರೆ. ಮತ್ತೆ ಕೆಲವರು ನಿಜವಾಗಿಯೂ ಕೋಚ್ ಆಯ್ಕೆ ಮಾಡಬೇಕಿದ್ದರೆ ದ್ರಾವಿಡ್, ಅನಿಲ್ ಕುಂಬ್ಳೆ ಅಥವಾ ಗಂಗೂಲಿಯಂತಹ ಪ್ರತಿಭಾವಂತರವನ್ನು ಆಯ್ಕೆ ಮಾಡಿ. ಅದರ ಬದಲು ಇಂತಹವರನ್ನು ಆಯ್ಕೆ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.