ವಿರಾಟ್ ಕೊಹ್ಲಿಯನ್ನು ಪಾಕ್ ಮಾಜಿ ನಾಯಕ ಇಮ್ರಾನ್ ಖಾನ್ ಗೆ ಹೋಲಿಸಿದ ಕೋಚ್ ರವಿಶಾಸ್ತ್ರಿ!
ಬುಧವಾರ, 6 ಫೆಬ್ರವರಿ 2019 (09:17 IST)
ವೆಲ್ಲಿಂಗ್ಟನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕೋಚ್ ರವಿಶಾಸ್ತ್ರಿ ಪಾಕಿಸ್ತಾನದ ಮಾಜಿ ನಾಯಕ, ಹಾಲಿ ಪ್ರಧಾನಿ ಇಮ್ರಾನ್ ಖಾನ್ ಗೆ ಹೋಲಿಸಿ ಅಚ್ಚರಿ ಮೂಡಿಸಿದ್ದಾರೆ.
ಕೊಹ್ಲಿ ನಾಯಕತ್ವವನ್ನು ಕೊಂಡಾಡಿದ ರವಿಶಾಸ್ತ್ರಿ ಆತನ ಶೈಲಿ ನನಗೆ ಇಮ್ರಾನ್ ಖಾನ್ ನಾಯಕತ್ವವನ್ನು ನೆನಪಿಸುತ್ತದೆ ಎಂದಿದ್ದಾರೆ.
‘ಒಂದೇ ವರ್ಷ ಒಬ್ಬ ಬ್ಯಾಟ್ಸ್ ಮನ್ ಆಗಿ, ನಾಯಕನಾಗಿ ಮಿಂಚುವುದು, ಐಸಿಸಿ ಅವಾರ್ಡ್ ಗೆಲ್ಲುವುದು ಸುಲಭದ ಮಾತಲ್ಲ. ಕೊಹ್ಲಿಯಲ್ಲಿ ವಿವಿ ರಿಚರ್ಡ್ಸ್ ನಲ್ಲಿದ್ದ ಆಕ್ರಮಣಕಾರಿ ಸ್ವಭಾವವಿದೆ. ಇಮ್ರಾನ್ ಖಾನ್ ರಂತೆ ತಾನೇ ಗುರಿ ನಿರ್ಮಿಸಿ ಅದನ್ನು ತನ್ನದೇ ಶೈಲಿಯಲ್ಲಿ ಸಾಧಿಸುವ ಗುಣವಿದೆ. ಹೀಗಾಗಿ ನನಗೆ ಕೊಹ್ಲಿಯನ್ನು ನೋಡುವಾಗ ಇಮ್ರಾನ್ ಖಾನ್ ನೆನಪಾಗುತ್ತಾರೆ’ ಎಂದು ರವಿಶಾಸ್ತ್ರಿ ಹೊಗಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ