ಕೋಚ್ ಆಗಿ ಮುಂದುವರಿದ ಖುಷಿಯಲ್ಲಿ ರವಿಶಾಸ್ತ್ರಿ ಹೇಳಿದ್ದೇನು?

ಭಾನುವಾರ, 18 ಆಗಸ್ಟ್ 2019 (09:21 IST)
ಮುಂಬೈ: ಮತ್ತೊಂದು ಅವಧಿಗೆ ಟೀಂ ಇಂಡಿಯಾ ಕೋಚ್ ಆಗಿ ಪುನರಾಯ್ಕೆಯಾದ ರವಿಶಾಸ್ತ್ರಿ ವಿಡಿಯೋ ಸಂದೇಶ ಮೂಲಕ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.


ಮತ್ತೊಂದು ಬಾರಿಗೆ ನನ್ನನ್ನು ಆಯ್ಕೆ ಮಾಡಿರುವುದು ಗೌರವಯುತ ವಿಷಯ. ಇದಕ್ಕೆ ಕ್ರಿಕೆಟ್ ಸಲಹಾ ಸಮಿತಿಗೆ ಆಭಾರಿಯಾಗಿದ್ದೇನೆ ಎಂದು ರವಿಶಾಸ್ತ್ರಿ ವಿಡಿಯೋ ಸಂದೇಶ ನೀಡಿರುವುದನ್ನು ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.

‘ನನ್ನ ಮೇಲೆ ವಿಶ್ವಾಸವಿಟ್ಟು ಮುಂದಿನ 26 ತಿಂಗಳುಗಳಿಗೆ ಮತ್ತೆ ಕೋಚ್ ಆಗಿ ಆಯ್ಕೆ ಮಾಡಿದ ಶಾಂತ, ಕಪಿಲ್ ಮತ್ತು ಅಂಶುಮಾನ್ ಗೆ ನಾನು ಧನ್ಯವಾದ ಸಲ್ಲಿಸುತ್ತಿದ್ದೇನೆ. ಭಾರತ ತಂಡದ ಭಾಗವಾಗಿರುವುದು ದೊಡ್ಡ ಗೌರವದ ವಿಷಯ. ನನಗೆ ಈ ತಂಡದ ಮೇಲೆ ವಿಶ್ವಾಸವಿರುವದರಿಂದಲೇ ಇಲ್ಲಿಗೆ ಬಂದೆ. ಈ ತಂಡ ಹಿಂದಿನ ಎಲ್ಲಾ ತಂಡಗಳಂತೆ ಒಂದು ಇತಿಹಾಸ ಸೃಷ್ಟಿಸುತ್ತದೆ ಎಂಬುದು ನನ್ನ ವಿಶ್ವಾಸ’ ಎಂದು ಶಾಸ್ತ್ರಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ