ಅವಗಣನೆಯಿಂದ ಬೇಸತ್ತು ನಿವೃತ್ತಿಗೆ ಚಿಂತಿಸಿದ್ದ ರವಿಚಂದ್ರನ್ ಅಶ್ವಿನ್
ಹಾಗಂತ ಸಂದರ್ಶನವೊಂದರಲ್ಲಿ ಅಶ್ವಿನ್ ಹೇಳಿಕೊಂಡಿದ್ದಾರೆ. 2018 ರಲ್ಲಿ ಗಾಯಗೊಂಡಾಗ ಯಾರೂ ನನಗೆ ಬೆಂಬಲವಾಗಿ ನಿಲ್ಲುತ್ತಿಲ್ಲ ಎಂದು ಮನಸ್ಸಿಗೆ ನೋವಾಗಿತ್ತು. ನಾನು ಇಷ್ಟೆಲ್ಲಾ ತಂಡಕ್ಕೆ ಗೆಲುವು ಕೊಡಿಸಲು ಪಾತ್ರವಹಿಸಿದ್ದೇನೆ. ಆದರೆ ಕಷ್ಟದ ಸಮಯದಲ್ಲಿ ಯಾರೂ ನನ್ನ ಕೈಹಿಡಿಯುತ್ತಿಲ್ಲ ಎಂಬ ಬೇಸರ ಮನಸ್ಸಲ್ಲಿತ್ತು.
ಇದರಿಂದಾಗಿ ನಿವೃತ್ತಿಗೂ ಚಿಂತನೆ ಮಾಡಿದ್ದೆ ಎಂದು ಅನುಭವಿ ಸ್ಪಿನ್ನರ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಎಲ್ಲರಿಗೂ ಬೆಂಬಲ ಸಿಗುತ್ತದೆ. ಆದರೆ ನನಗೆ ಮಾತ್ರ ಸಿಗುತ್ತಿಲ್ಲ ಎಂಬ ಏಕಾಂಗಿತನ ಅಶ್ವಿನ್ ರನ್ನು ಕಾಡಿತ್ತಂತೆ.