ರವಿಚಂದ್ರನ್ ಅಶ್ವಿನ್ ನಿವೃತ್ತಿ ಬಳಿಕ ರವೀಂದ್ರ ಜಡೇಜಾ ಕಂಪ್ಲೇಂಟು

Krishnaveni K

ಶನಿವಾರ, 21 ಡಿಸೆಂಬರ್ 2024 (10:11 IST)
ಮೆಲ್ಬೊರ್ನ್: ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಿವೃತ್ತಿ ಬಗ್ಗೆ ಅವರ ಸ್ಪಿನ್ ಜೊತೆಗಾರ ರವೀಂದ್ರ ಜಡೇಜಾ ಪ್ರತಿಕ್ರಿಯಿಸಿದ್ದು ಒಂದು ದೂರನ್ನೂ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಿಸಿದರು. ಇದು ಎಲ್ಲರಿಗೂ ಅಚ್ಚರಿಯ ಜೊತೆಗೆ ಬೇಸರ ತಂದಿತ್ತು. ಕೊನೆಯ ಕ್ಷಣದವರೆಗೂ ಅಶ್ವಿನ್ ತಂಡದ ಇತರೆ ಆಟಗಾರರಿಂದ ಈ ವಿಚಾರವನ್ನು ಮುಚ್ಚಿಟ್ಟಿದ್ದರು ಎನ್ನಲಾಗಿದೆ.

ಟೀಂ ಇಂಡಿಯಾದಲ್ಲಿ ಅಶ್ವಿನ್-ಜಡೇಜಾ ಜೋಡಿ ಸಾಕಷ್ಟು ಖ್ಯಾತಿ ಪಡೆದಿದೆ. ಇಬ್ಬರೂ ಜೊತೆಯಾಗಿ ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಮೈದಾನದಲ್ಲಿ ಬೌಲಿಂಗ್ ಗಾಗಿ ನಾಯಕನ ಜೊತೆ ಪೈಪೋಟಿ ನಡೆಸುತ್ತಲೇ ಇರುತ್ತಾರೆ. ಇದೀಗ ಅಶ್ವಿನ್ ನಿವೃತ್ತಿ ಬಗ್ಗೆ ನನಗೆ ಗೊತ್ತೇ ಇರಲಿಲ್ಲ ಎಂದು ಜಡೇಜಾ ಹೇಳಿದ್ದಾರೆ.

‘ನಾವು ಇಡೀ ದಿನ ಜೊತೆಗೇ ಕಳೆದಿದ್ದೆವು, ಆದರೂ ನಿವೃತ್ತಿ ಬಗ್ಗೆ ನನಗೆ ಸುಳಿವೂ ನೀಡಿರಲಿಲ್ಲ. ಪ್ರೆಸ್ ಕಾನ್ಫರೆನ್ಸ್ ನಲ್ಲಿ ಅಶ್ವಿನ್ ನಿವೃತ್ತಿ ಘೋಷಣೆ ಮಾಡುವ 5 ನಿಮಿಷ ಮೊದಲಷ್ಟೇ ನನಗೆ ವಿಚಾರ ತಿಳಿಯಿತು. ಅಶ್ವಿನ್ ನನಗೆ ಮೈದಾನದಲ್ಲೂ ಮೆಂಟರ್ ಆಗಿದ್ದರು. ನಾವು ಸಾಕಷ್ಟು ವರ್ಷ ಒಟ್ಟಿಗೇ ಆಡಿದ್ದೇವೆ. ಮೈದಾನದಲ್ಲಿದ್ದಾಗ ಆಗಾಗ ಹೇಗೆ ಬೌಲಿಂಗ್ ಮಾಡಬೇಕು ಎಂದು ಸಂದೇಶ ಕೊಡುತ್ತಲೇ ಇರುತ್ತಿದ್ದೆವು. ಖಂಡಿತವಾಗಿಯೂ ನಾನು ಅಶ್ವಿನ್ ರನ್ನು ಮಿಸ್ ಮಾಡಲಿದ್ದೇನೆ. ಆದರೆ ಮುಂದೆ ಭಾರತಕ್ಕೆ ಇನ್ನಷ್ಟು ಉತ್ತಮ ಆಲ್ ರೌಂಡರ್ ಸಿಗಬಹುದು ಎಂದು ಭರವಸೆ ಇಡಬೇಕಷ್ಟೇ. ಅವರ ಸ್ಥಾನವನ್ನು ಯುವಕರು ತುಂಬಬೇಕು’ ಎಂದು ಜಡೇಜಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ