ಅಶ್ವಿನ್ ಗೆ ಬಳಿಕ ಟೀಂ ಇಂಡಿಯಾದಿಂದ ನಿವೃತ್ತಿಯ ಡೆಡ್ ಲೈನ್ ಪಡೆದ ಕ್ರಿಕೆಟಿಗ ಇವರೇ

Krishnaveni K

ಶುಕ್ರವಾರ, 20 ಡಿಸೆಂಬರ್ 2024 (11:17 IST)
ಮೆಲ್ಬೊರ್ನ್: ಈಗಷ್ಟೇ ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಬೇಸರ ಅಭಿಮಾನಿಗಳಲ್ಲಿದೆ. ಅದರ ನಡುವೆ ಈಗ ಮತ್ತೊಂದು ದೊಡ್ಡ ವಿಕೆಟ್ ಪತನವಾಗುವುದು ಗ್ಯಾರಂಟಿಯಾಗಿದೆ.
 

ಟೀಂ ಇಂಡಿಯಾದ ಹಿರಿಯ ಆಟಗಾರರಿಗೆ ಆಸ್ಟ್ರೇಲಿಯಾ ಸರಣಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಡೆಡ್ ಲೈನ್ ನೀಡಲಾಗಿತ್ತು ಎಂಬ ಸುದ್ದಿಗಳಿತ್ತು. ಅದರಂತೆ ಅಶ್ವಿನ್ ತಮಗೆ ಇನ್ನು ತಂಡದಲ್ಲಿ ಅವಕಾಶ ಸಿಗುತ್ತಿಲ್ಲ ಎಂದು ಅರಿವಾದೊಡನೇ ನಿವೃತ್ತಿ ಘೋಷಣೆ ಮಾಡಿದ್ದಾರೆ. ಹಾಗೆ ನೋಡಿದರೆ ಅಶ್ವಿನ್ ಉತ್ತಮ ಲಯದಲ್ಲೇ ಇದ್ದರು. ದೇಶೀಯ ಪಿಚ್ ಗಳಲ್ಲಿ ಅವರು ಈಗಲೂ ಮ್ಯಾಚ್ ವಿನ್ನರ್. ಹೀಗಾಗಿ ಅವರ ನಿವೃತ್ತಿ ಎಲ್ಲರಿಗೂ ಬೇಸರದ ಜೊತೆಗೆ ಆಘಾತ ತಂದಿದೆ.

ಇದೀಗ ಅವರ ಬಳಿಕ ಮತ್ತೊಬ್ಬ ಆಟಗಾರನಿಗೆ ಬಿಸಿಸಿಐ ಡೆಡ್ ಲೈನ್ ನೀಡಿದೆಯಂತೆ. ಅವರು ಬೇರೆ ಯಾರೂ ಅಲ್ಲ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ. ಕ್ಯಾಪ್ಟನ್ ರೋಹಿತ್ ಶರ್ಮಾಗೆ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯವೇ ಡೆಡ್ ಲೈನ್ ಎನ್ನಲಾಗಿದೆ. ಸಿಡ್ನಿ ಟೆಸ್ಟ್ ಒಳಗಾಗಿ ರೋಹಿತ್ ಉತ್ತಮ ಇನಿಂಗ್ಸ್ ಆಡಿದರೆ ಮುಂದೆ ಇಂಗ್ಲೆಂಡ್ ಸರಣಿ ಅವರ ಕೊನೆಯ ಸರಣಿಯಾಗಲಿದೆ. ಇಲ್ಲದೇ ಹೋದರೆ ಈ ಆಸ್ಟ್ರೇಲಿಯಾ ಸರಣಿಯ ಅಂತ್ಯಕ್ಕೆ ಅವರೂ ವಿದಾಯ ಘೋಷಿಸಲಿದ್ದಾರೆ ಎಂದು ವರದಿಯಾಗಿದೆ.

ಇನ್ನೊಬ್ಬ ಹಿರಿಯ ತಾರೆ ವಿರಾಟ್ ಕೊಹ್ಲಿ ಕೂಡಾ ಉತ್ತಮ ಫಾರ್ಮ್ ಪ್ರದರ್ಶಿಸಿಲ್ಲ. ಒಂದು ವೇಳೆ ಭಾರತ ಮುಂದಿನ ಎರಡು ಟೆಸ್ಟ್ ಪಂದ್ಯಗಳನ್ನು ಸೋತು ಡಬ್ಲ್ಯುಟಿಸಿ ಫೈನಲ್ ಗೇರಲು ವಿಫಲರಾದರೆ ಕೊಹ್ಲಿಗೂ ನಿವೃತ್ತಿಗೆ ಸೂಚನೆ ಸಿಗಲಿದೆ ಎಂಬ ಮಾತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಮೊನ್ನೆ ಅಶ್ವಿನ್ ನಿವೃತ್ತಿ ಘೋಷಿಸಿದಾಗಿ ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಎಲ್ಲರಿಗಿಂತ ಹೆಚ್ಚು ಭಾವುಕರಾಗಿದ್ದು ಗಮನಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ