ಚೆನ್ನೈ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ರವಿಚಂದ್ರನ್ ಅಶ್ವಿನ್ ನಿವೃತ್ತಿ ಹೇಳಿದ ಬಳಿಕ ಅವರಿಗೆ ಮೊದಲು ಕರೆ ಮಾಡಿದ್ದು ಯಾರು, ಯಾರೆಲ್ಲಾ ವಿಶ್ ಮಾಡಿದ್ದರು ಎಂದು ಅವರೇ ಬಹಿರಂಗಪಡಿಸಿದ್ದಾರೆ.
ರವಿಚಂದ್ರನ್ ಅಶ್ವಿನ್ ದಿಡೀರ್ ಆಗಿ ನಿವೃತ್ತಿ ಘೋಷಿಸಿದ್ದು ಎಲ್ಲರಿಗೂ ಅಚ್ಚರಿ ಜೊತೆಗೆ ಆಘಾತವನ್ನೂ ಉಂಟು ಮಾಡಿತ್ತು. ಸ್ವತಃ ಅಶ್ವಿನ್ ಡ್ರೆಸ್ಸಿಂಗ್ ರೂಂನಲ್ಲಿ ಕಣ್ಣೀರು ಹಾಕಿದ್ದರು. ಇತ್ತ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕೂಡಾ ಬೇಸರಗೊಂಡಿದ್ದರು.
ಅಶ್ವಿನ್ ಗೆ ನಿವೃತ್ತಿ ಘೋಷಣೆ ಬಳಿಕ ಅನೇಕರು ವಿಶ್ ಮಾಡಿದ್ದಾರೆ. ಕೆಲವರು ನೇರವಾಗಿ ವಿಶ್ ಮಾಡಿದ್ದರೆ ಮತ್ತೆ ಕೆಲವರು ಕರೆ ಮಾಡಿ ಶುಭ ಕೋರಿದ್ದಾರೆ. ಕರೆ ಮಾಡಿ ತಮಗೆ ಯಾರೆಲ್ಲಾ ಶುಭ ಹಾರೈಸಿದ್ದಾರೆ ಎಂದು ಸ್ವತಃ ಅಶ್ವಿನ್ ಕಾಲ್ ಲಿಸ್ಟ್ ಫೋಟೋ ಪ್ರಕಟಿಸುವ ಮೂಲಕ ವಿಶ್ ಮಾಡಿದ್ದಾರೆ. ಆ ಪೈಕಿ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಮೊದಲಿಗರು. ಅವರ ಬಳಿಕ ಅಶ್ವಿನ್ ತಂದೆ ಕಾಲ್ ಮಾಡಿದ್ದಾರೆ. ಉಳಿದಂತೆ ಕಪಿಲ್ ದೇವ್ ಕೂಡಾ ಕಾಲ್ ಮಾಡಿದ್ದಾರೆ.
ಇನ್ನು ಅಶ್ವಿನ್ ನಿವೃತ್ತಿ ಬಗ್ಗೆ ಅವರ ತಂದೆ ಮಾಡಿದ್ದ ಕಾಮೆಂಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನನ್ನ ತಂದೆಗೆ ಮಾಧ್ಯಮಗಳ ಜೊತೆ ಹೇಗೆ ಮಾತನಾಡಬೇಕೆಂದು ಗೊತ್ತಿಲ್ಲ. ಅವರನ್ನು ಬಿಟ್ಟು ಬಿಡಿ ಎಂದು ತಮಾಷೆ ಮಾಡಿದ್ದಾರೆ.