ಬಿಸಿಸಿಐ ವಿರುದ್ಧ ಸಿಡಿದೆದ್ದರಾ ಶ್ರೇಯಸ್ ಅಯ್ಯರ್: ಮಾಡಿದ್ದೇನು

Krishnaveni K

ಮಂಗಳವಾರ, 23 ಸೆಪ್ಟಂಬರ್ 2025 (13:51 IST)
ಮುಂಬೈ: ತಮ್ಮನ್ನು ಪದೇ ಪದೇ ಟೀಂ ಇಂಡಿಯಾದಿಂದ ಕಡೆಗಣಿಸುತ್ತಿರುವುದಕ್ಕೆ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಸಿಡಿದೆದ್ದಿದ್ದಾರೆ. ಇಂಡಿಯಾ ಎ ತಂಡದ ನಾಯಕತ್ವದಿಂದ ಪಂದ್ಯಕ್ಕೆ ಕೆಲವೇ ಕ್ಷಣಗಳಿರುವಾಗ ಹಿಂದೆ ಸರಿದಿದ್ದಾರೆ.
 

ಶ್ರೇಯಸ್ ಅಯ್ಯರ್ ದೇಶೀಯ ಕ್ರಿಕೆಟ್ ನಲ್ಲಿ ಎಷ್ಟೇ ಉತ್ತಮ ಫಾರ್ಮ್ ಪ್ರದರ್ಶಿಸಿದರೂ ಅವರನ್ನು ಟಿ20 ಮತ್ತು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡುತ್ತಿಲ್ಲ. ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೂ ಅವರನ್ನು ಪರಿಗಣಿಸಲ್ಲ ಎಂಬ ಸುದ್ದಿ ಕೇಳಿಬಂದಿತ್ತು.

ಆದರೆ ಇದೀಗ ಅವರನ್ನು ಆಸ್ಟ್ರೇಲಿಯಾ ಎ ತಂಡದ ವಿರುದ್ಧ ನಡೆಯಬೇಕಿದ್ದ ಅನಧಿಕೃತ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ನಾಯಕರಾಗಿದ್ದರು. ಯಾವಾಗ ಟೆಸ್ಟ್ ಸರಣಿಗೆ ತಮ್ಮನ್ನು ಪರಿಗಣಿಸುತ್ತಿಲ್ಲ ಎಂದು ಗೊತ್ತಾಯಿತೋ ಆಗಲೇ ಶ್ರೇಯಸ್ ಅಯ್ಯರ್ ಅಸಮಾಧಾನದಿಂದಲೇ ಎ ತಂಡದ ನಾಯಕತ್ವದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. ಇದೀಗ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಧ್ರುವ ಜ್ಯುರೆಲ್ ತಂಡದ ನಾಯಕರಾಗಲಿದ್ದಾರೆ.

ಟೆಸ್ಟ್ ತಂಡಕ್ಕೆ ತಮ್ಮನ್ನು ಪರಿಗಣಿಸದಿದ್ದ ಮೇಲೆ ಎ ತಂಡದ ಪರ ಟೆಸ್ಟ್ ಪಂದ್ಯವಾಡುವುದರ ಔಚಿತ್ಯವೇನು ಎಂದೇ ಶ್ರೇಯಸ್ ಅಯ್ಯರ್ ಈ ರೀತಿ ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ ಅಧಿಕೃತವಾಗಿ ಶ್ರೇಯಸ್ ಅಯ್ಯರ್ ಹಿಂದೆ ಸರಿದಿರುವುದಕ್ಕೆ ಕಾರಣವೇನು ಎಂದು ತಿಳಿದುಬಂದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ