RCB vs SRH match: ಆರ್ ಸಿಬಿಗೆ ಇಂದು ಮರಳಿ ನಂ1 ಪಟ್ಟಕ್ಕೇರುವುದೇ ಗುರಿ

Krishnaveni K

ಶುಕ್ರವಾರ, 23 ಮೇ 2025 (09:00 IST)
ಲಕ್ನೋ: ಐಪಿಎಲ್ 2025 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಲಕ್ನೋ ಮೈದಾನದಲ್ಲಿ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರುವುದೇ ಆರ್ ಸಿಬಿ ಗುರಿಯಾಗಿರಲಿದೆ.

ಚಿನ್ನಸ್ವಾಮಿ ಮೈದಾನದಲ್ಲಿ ಕೆಕೆಆರ್ ವಿರುದ್ಧ ನಡೆಯಬೇಕಿದ್ದ ಕಳೆದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಹಾಗಿದ್ದರೂ 12 ಪಂದ್ಯಗಳ ಪೈಕಿ 8 ರಲ್ಲಿ ಗೆಲುವು ದಾಖಲಿಸಿದ್ದ ಆರ್ ಸಿಬಿ ಪ್ಲೇ ಆಫ್ ಗೇರಿತ್ತು. ಇದೀಗ ಈಗಾಗಲೇ ಕೂಟದಿಂದ ಹೊರಬಿದ್ದಿರುವ ಹೈದರಾಬಾದ್ ವಿರುದ್ಧ ಮತ್ತೊಂದು ಪಂದ್ಯವಾಡಲಿದೆ.

ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್ ಸಿಬಿ ಮತ್ತೆ ನಂ.1 ಪಟ್ಟಕ್ಕೇರುವ ಗುರಿ ಹೊಂದಿದೆ. ಎರಡೂ ತಂಡಗಳಿಗೂ ಇದು ತಟಸ್ಥ ತಾಣವಾಗಿರುವುದರಿಂದ ಪಂದ್ಯದ ಫಲಿತಾಂಶದ ಮೇಲೆ ಕುತೂಹಲವಿದೆ. ಆರ್ ಸಿಬಿ ಇದುವರೆಗೆ ಚಿನ್ನಸ್ವಾಮಿ ಹೊರಗೆ ನಡೆದ ಪಂದ್ಯಗಳನ್ನು ಗೆಲ್ಲುತ್ತಾ ಬಂದಿರುವುದು ಪ್ಲಸ್ ಪಾಯಿಂಟ್.

ಚಿನ್ನಸ್ವಾಮಿ ಮೈದಾನದಂತೆ ಇಲ್ಲಿ ಮಳೆಯ ಸೂಚನೆಯೂ ಇಲ್ಲ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಪಂದ್ಯ ನಡೆಯಲಿದೆ. ಜೊತೆಗೆ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ನಂತರ ನಡೆಯುತ್ತಿರುವ ಮೊದಲ ಪಂದ್ಯ ಇದಾಗಿದೆ. ಹೀಗಾಗಿ ಇಂದು ಕಿಂಗ್ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಮೈದಾನಕ್ಕೆ ಬರುವ ನಿರೀಕ್ಷೆಯಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ