ಜೊಹಾನ್ಸ್ ಬರ್ಗ್ ನಲ್ಲಿ ದಾಖಲೆ ಮಾಡಲಿದ್ದಾರೆ ಕಿಂಗ್ ಕೊಹ್ಲಿ
ಸದ್ಯಕ್ಕೆ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿರುವ ಕೊಹ್ಲಿ ಒಂದು ವೇಳೆ ಇಲ್ಲಿ ಸಿಡಿದರೆ ಹೊಸ ದಾಖಲೆಯಾಗಲಿದೆ. ಜೊಹಾನ್ಸ್ ಬರ್ಗ್ ಅಂಗಣದಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಸದ್ಯಕ್ಕೆ ನ್ಯೂಜಿಲೆಂಡ್ ನ ಜಾನ್ ರೈಡ್ (316) ಹೆಸರಲ್ಲಿದೆ. ಕೊಹ್ಲಿ 310 ರನ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಒಂದು ವೇಳೆ ಕೊಹ್ಲಿ ಇಲ್ಲಿ ಕೇವಲ ಏಳು ರನ್ ಗಳಿಸಿದರೆ ಮೊದಲ ಸ್ಥಾನಕ್ಕೇರಲಿದ್ದಾರೆ. ಒಂದು ವೇಳೆ ಈ ಪಂದ್ಯವನ್ನು ಟೀಂ ಇಂಡಿಯಾ ಗೆದ್ದರೆ ಮೊದಲ ಬಾರಿಗೆ ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದ ದಾಖಲೆ ಕೊಹ್ಲಿ ಬಳಗದ್ದಾಗಲಿದೆ.